ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಸನ್ನಿಹಿತ (Bhagwat | BJP | Advani | RSS)
 
ಮೋಹನ್ ಭಾಗವತ್ ಮತ್ತು ಎಲ್. ಕೆ. ಆಡ್ವಾಣಿ ಜತೆ ಬೆಳಗಿನ ಉಪಹಾರದ ಭೇಟಿ ಬಳಿಕ, ಪಕ್ಷವು ನಾಯಕತ್ವದ ಬಿಕ್ಕಟ್ಟು ಮತ್ತು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ಇತ್ಯರ್ಥ ಮಾಡಿಕೊಳ್ಳುವುದಾಗಿ ಬಿಜೆಪಿ ಆಶ್ವಾಸನೆ ನೀಡಿತೆಂದು ಆರ್‌ಎಸ್‌ಎಸ್ ಭಾನುವಾರ ಬೆಳಿಗ್ಗೆ ತಿಳಿಸಿದೆ. ರಾಜಧಾನಿಗೆ ತಮ್ಮ ಮ‌ೂರು ದಿನಗಳ ಭೇಟಿಗೆ ತೆರೆಎಳೆಯುವ ಮುನ್ನ, ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್ ಆಡ್ವಾಣಿ ನಿವಾಸಕ್ಕೆ ತೆರಳಿ ಬಿಜೆಪಿಯ ಪ್ರಸಕ್ತ ಬಿಕ್ಕಟ್ಟು ಕುರಿತು ಚರ್ಚಿಸಿದರು.

ಶನಿವಾರ ಅವರು ಹಿರಿಯ ನಾಯಕ ಮುರಳಿ ಮನೋಹರ್ ಜೋಷಿ ನಿವಾಸಕ್ಕೆ ಭೋಜನಕೂಟಕ್ಕೆ ತೆರಳಿ ಚರ್ಚೆ ನಡೆಸಿದ್ದರು. ಭಾನುವಾರ ಬೆಳಿಗ್ಗೆ ನಡೆದ ಭೇಟಿ ಬಳಿಕ, ಆಡ್ವಾಣಿ ನಿವಾಸಕ್ಕೆ ಭಾಗವತ್ ಅವರನ್ನು ಜತೆಗೂಡಿದ್ದ ಆರ್‌ಎಸ್‌ಎಸ್ ನಾಯಕ ಮದನ್ ದಾಸ್ ದೇವಿ ಮಾತನಾಡುತ್ತಾ, ಬಿಜೆಪಿ ನಾಯಕರು ಐಕ್ಯತೆ ಕಾಪಾಡಿಕೊಂಡು ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಶಕ್ತಿಶಾಲಿಯಾಗಿ ಹೊರಹೊಮ್ಮುವ ಭರವಸೆ ನೀಡಿದರೆಂದು ಹೇಳಿದ್ದಾಗಿ ವರದಿಗಾರರು ತಿಳಿಸಿದ್ದಾರೆ.

ಪ್ರಸಕ್ತ ನಾಯಕತ್ವದ ಬಿಕ್ಕಟ್ಟಿನ ಬಗ್ಗೆ, ಪಕ್ಷವು ಸ್ವತಃ ನಿರ್ಧಾರ ಕೈಗೊಂಡು, ಅದನ್ನು ನಿರ್ಧರಿಸುವ ಸಂದರ್ಭವನ್ನು ಪ್ರಕಟಿಸಲಾಗುವುದೆಂದು ಅವರು ಹೇಳಿದ್ದಾರೆ. ಇದಕ್ಕೆ ಮುಂಚೆ ಶನಿವಾರ ನಡೆದ ಮಾತುಕತೆಯಲ್ಲಿ ಬಿಜೆಪಿಯಲ್ಲಿ ಆಂತರಿಕ ಒಳಜಗಳ ಮತ್ತು ಅಶಿಸ್ತಿಗೆ ತೆರೆಎಳೆಯಬೇಕೆಂದು ಭಾಗವತ್ ಅಭಿಪ್ರಾಯ ವ್ಯಕ್ತಪಡಿಸಿದರೆಂದು ತಿಳಿದುಬಂದಿದೆ. ಎಲ್. ಕೆ. ಆಡ್ವಾಣಿ ಆರ್‌ಎಸ್‌ಎಸ್ ಮುಖ್ಯಸ್ಥರನ್ನು ಭೇಟಿ ಮಾಡಿರುವ ಹಿನ್ನೆಲೆಯಲ್ಲಿ ಆಡ್ವಾಣಿ ನಾಯಕತ್ವ ಹುದ್ದೆಯಿಂದ ಕೆಳಕ್ಕಿಳಿದು ಯುವನಾಯಕರಿಗೆ ಅವಕಾಶ ಕಲ್ಪಿಸಲಾಗುತ್ತದೆಂಬ ಊಹಾಪೋಹ ಗರಿಗೆದರಿದೆ.

ಶುಕ್ರವಾರ ಸಂಜೆ ಕೂಡ ಆರ್‌ಎಸ್ಎಸ್ ನಾಯಕರ ಜತೆ ಬಿಜೆಪಿಯ ನಾಲ್ವರು ನಾಯಕರ ಮಾತುಕತೆ ಮಹತ್ವ ಪಡೆದಿದೆ. ಆಡ್ವಾಣಿಯ ಭವಿಷ್ಯದ ಪಾತ್ರ ಮತ್ತು ರಾಜನಾಥ್ ಸಿಂಗ್ ಅಧಿಕಾರಾವಧಿ ಅಂತಿಮ ಹಂತ ತಲುಪಿದ್ದರಿಂದ ಮುಂದಿನ ಪಕ್ಷದ ಅಧ್ಯಕ್ಷರು ಯಾರೆಂಬ ಹಿನ್ನೆಲೆಯಲ್ಲಿ ಈ ಮಾತುಕತೆ ಮಹತ್ವ ಪಡೆದಿದೆ. ಚರ್ಚೆಯಲ್ಲಿ ಭಾಗವಹಿಸಿದ್ದ ನಾಲ್ವರು ನಾಯಕರಾದ ಅರುಣ್ ಜೇಟ್ಲಿ, ಸುಶ್ಮಾ ಸ್ವರಾಜ್, ವೆಂಕಯ್ಯ ನಾಯ್ಡು ಮತ್ತು ಅನಂತ್ ಕುಮಾರ್ ಅವರು ಆರ್‌ಎಸ್ಎಸ್ ಮಂಡಿಸುವ ಯಾವುದೇ ಯೋಜನೆಯನ್ನು ಒಪ್ಪಲು ತಾವು ಇಚ್ಛಿಸುವುದಾಗಿ ಹೇಳಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ