ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಜೆಪಿ ಚಿಂತೆ ನಿಮಗ್ಯಾಕ್ರೀ: ಪ್ರಧಾನಿಗೆ ರಾಜನಾಥ್ (Rajnath | Singh | New Delhi | Prime Minister,)
 
ಬಿಜೆಪಿ ಪಕ್ಷದ ಬೆಳವಣಿಗೆ ಕುರಿತು ನಿಮಗೆ ಚಿಂತೆ ಬೇಡವೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಹೇಳಿದ್ದಾರೆ.

'ಬಿಜೆಪಿಯಲ್ಲಿನ ಬೆಳವಣಿಗೆ ಹಿತಕರವಲ್ಲ. ಇದು ಬಿಜೆಪಿಯ ಆಂತರಿಕ ವಿಷಯವಾದರೂ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷಗಳ ಸ್ಥಿರತೆ ಅತ್ಯಂತ ಮುಖ್ಯವಾಗಿದೆ. ಇಲ್ಲದಿದ್ದರೆ ದೇಶದ ಮೇಲೆ ಅದು ಪರಿಣಾಮ ಬೀರುತ್ತದೆಂದು' ಪ್ರಧಾನಿ ಮನಮೋಹನ್ ಸಿಂಗ್ ಶನಿವಾರ ನೀಡಿದ ಹೇಳಿಕೆಗೆ ರಾಜನಾಥ್ ಸಿಂಗ್ ಪ್ರತಿಕ್ರಿಯಿಸುತ್ತಾ ಮೇಲಿನಂತೆ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ರಾಜನಾಥ್ ಸಿಂಗ್ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವೇಡ್ಕರ್ ಭಾನುವಾರ ಮಾಧ್ಯಮಕ್ಕೆ ತಿಳಿಸಿದರು.


'ಬಿಜೆಪಿಯಲ್ಲಿನ ಆಂತರಿಕ ಬೆಳವಣಿಗೆ ಬಗ್ಗೆ ಚಿಂತಿತರಾಗುವ ಬದಲಿಗೆ ಅಭಿವೃದ್ಧಿ ಕಾರ್ಯಗಳ ಕಡೆ ಗಮನ ಕೊಡಿ. ದೇಶದ ರೈತರು ಬರದಿಂದ ತತ್ತರಿಸಿದ್ದಾರೆ. ಬರ ನಿರ್ವಹಣೆಗೆ ಕಾರ್ಯಪಡೆಯೊಂದನ್ನು ರಚಿಸಿ. ಆಹಾರಪದಾರ್ಥಗಳ ಬೆಲೆ ಗಗನಕ್ಕೇರುತ್ತಿದೆ. ಅದನ್ನು ನಿಭಾಯಿಸಲು ತಕ್ಷಣದ ಕ್ರಮ ಕೈಗೊಳ್ಳಿ' ಎನ್ನುವುದು ರಾಜನಾಥ್ ಪತ್ರದ ಒಕ್ಕಣೆಯೆಂದು ಜಾವೇಡ್ಕರ್ ಹೇಳಿದ್ದಾರೆ.

ಪಕ್ಷದಲ್ಲಿ ನಾಯಕತ್ವ ಬದಲಾವಣೆ ಕುರಿತು ಮಾಧ್ಯಮದ ವರದಿಗಳನ್ನು ಕುರಿತು ಅವೆಲ್ಲ ಊಹಾಪೋಹಗಳು ಎಂದು ಅವರು ಹೇಳಿದ್ದಾರೆ. ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕುರಿತು ಊಹಾಪೋಹ ಮಾಡುವುದನ್ನು ನಿಲ್ಲಿಸುವಂತೆ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಪಕ್ಷದಲ್ಲಿ ಅಂತಹ ಯಾವುದೇ ಬೆಳವಣಿಗೆಯಿಲ್ಲವೆಂದು ಅವರು ಹೇಳಿದ್ದಾರೆ. ಆದರೆ ಜಾವೇಡ್ಕರ್ ಹೇಳಿಕೆಗೂ, ಕೆಲವು ಮ‌ೂಲಗಳನ್ನು ಆಧರಿಸಿ ಟಿವಿ ಚಾನೆಲ್‌ಗಳು ಬಿತ್ತರಿಸುತ್ತಿರುವ ವರದಿಗಳೂ ತದ್ವಿರುದ್ಧವಾಗಿವೆ.

ಬಿಜೆಪಿಯ ಹಿರಿಯರಾದ ಎಲ್.ಕೆ. ಆಡ್ವಾಣಿ ಮತ್ತು ರಾಜನಾಥ್ ಸಿಂಗ್ ಅವರನ್ನು ಬದಲಿಸಿ ಯುವ ನಾಯಕರಿಗೆ ಡಿಸೆಂಬರ್‌ನೊಳಗೆ ಅವಕಾಶ ಕಲ್ಪಿಸಲಾಗುವುದೆಂದು ವಿಶ್ವಸನೀಯ ಮ‌ೂಲಗಳು ಮಾಧ್ಯಮಕ್ಕೆ ತಿಳಿಸಿದ್ದು, ಆರ್‌ಎಸ್‌ಎಸ್ ಜತೆ ಉತ್ತರಾಧಿಕಾರ ಯೋಜನೆ ಕುರಿತು ಬಿಜೆಪಿ ಮಾತುಕತೆ ನಡೆಸಿದೆಯೆಂದು ಅವು ತಿಳಿಸಿವೆ. ಆಡ್ವಾಣಿ ಅವರು ಪ್ರತಿಪಕ್ಷದ ನಾಯಕ ಸ್ಥಾನದಿಂದ ಮುಂದಿನ ಸಂಸತ್ ಅಧಿವೇಶನಕ್ಕೆ ಮುಂಚೆಯೇ ಕೆಳಕ್ಕಿಳಿಯುವರೆಂದು ಮ‌ೂಲಗಳು ಹೇಳಿವೆ.

ಪಕ್ಷದ ನಾಯಕಿ ಸುಶ್ಮಾ ಸ್ವರಾಜ್ ಅವರು ಆಡ್ವಾಣಿ ಸ್ಥಾನಕ್ಕೆ ಬರಲಿದ್ದಾರೆಂಬ ಊಹಾಪೋಹಗಳು ದಟ್ಟವಾಗಿ ಹರಡಿದೆ. ಡಿಸೆಂಬರ್‌ನಲ್ಲಿ ರಾಜನಾಥ್ ಸಿಂಗ್ ಅವಧಿ ಮುಗಿದ ಬಳಿಕ ಅವರ ಬದಲಿಗೆ ಬೇರೊಬ್ಬರನ್ನು ನೇಮಿಸಲಾಗುವುದು ಎಂದೂ ಮ‌ೂಲಗಳು ಹೇಳಿವೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ