ನವದೆಹಲಿ/ಜೈಪುರ, ಸೋಮವಾರ, 31 ಆಗಸ್ಟ್ 2009( 10:10 IST )
ದೆಹಲಿಯಲ್ಲಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ತಮ್ಮ ಬೆಂಬಲಿಗರ ಸಮೇತ ಸೋಮವಾರ ಬಿಜೆಪಿ ಮುಖಂಡ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡುವ ಸಂಭವವಿದೆ. ರಾಜಸ್ತಾನ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಲು ವಸುಂಧರಾ ನಿರಾಕರಿಸಿದ ಹಿನ್ನೆಲೆಯಲ್ಲಿ ಉದ್ಭವಿಸಿದ ಬಿಕ್ಕಟ್ಟನ್ನು ಕೊನೆಗೊಳಿಸುವ ಯತ್ನವಾಗಿ ನಾಯ್ಡು ಅವರನ್ನು ಭೇಟಿ ಮಾಡಲಿದ್ದಾರೆ.
ರಾಜೆ ಅವರಿಂದ ರಾಜೀನಾಮೆ ಪಡೆಯುವ ಎಲ್ಲ ಯತ್ನಗಳು ವಿಫಲವಾದಾಗ, ಪಕ್ಷದ ವರಿಷ್ಠ ಮಂಡಳಿಯು ನಾಯ್ಡು ಅವರನ್ನು ರಾಯಭಾರಿಯಾಗಿ ನೇಮಿಸಿತು. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದ ಸೋಲಿನ ಹೊಣೆ ಹೊತ್ತು ಪ್ರತಿಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ರಾಜನಾಥ್ ಸಿಂಗ್ ರಾಜೆ ರಾಜೆಗೆ ಆಗ್ರಹಿಸಿದ್ದಾರೆ.
ಆದರೆ ಪಕ್ಷದ ಆದೇಶವನ್ನು ಧಿಕ್ಕರಿಸಿದ ರಾಜೆ, ಕೇಂದ್ರ ನಾಯಕತ್ವಕ್ಕೆ ತಮ್ಮ ಬಲಾಬಲ ಪ್ರದರ್ಶಿಸಲು ದೆಹಲಿಗೆ 50ಕ್ಕೂ ಹೆಚ್ಚು ಶಾಸಕರನ್ನು ಕಳಿಸಿದರು. ಈ ಶಾಸಕರು ಹಿರಿಯ ನಾಯಕ ಆಡ್ವಾಣಿ ಅವರ ಮಧ್ಯಸ್ಥಿಕೆ ಕೋರಲು ಭೇಟಿಗೆ ಯತ್ನಿಸಿದರಾದರೂ ಆಡ್ವಾಣಿ ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಬಳಿಕ ಆ.28ರಂದು ನಾಯ್ಡು ರಾಜೆ ಅವರನ್ನು ದೆಹಲಿಗೆ ಕರೆಸಿದಾಗ ಬಿಜೆಪಿಗೆ ತಮ್ಮ ನಿಷ್ಠೆಯನ್ನು ದೃಢಪಡಿಸಿದ ರಾಜೆ, ತಾವೊಬ್ಬರು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಪಕ್ಷದ ಆದೇಶವೇ ತಮಗೆ ಸರ್ವೋಚ್ಛವೆಂದು ತಿಳಿಸಿದ್ದರು.