ರಾಷ್ಟ್ರದಲ್ಲಿ ಹಂದಿಜ್ವರದ ಕೇಂದ್ರ ಬಿಂದು ಎಂಬಂತಾಗಿರುವ ಪುಣೆಯಲ್ಲಿ ಮತ್ತಿಬ್ಬರು ಈ ಹೆಮ್ಮಾರಿಗೆ ಬಲಿಯಾಗುವ ಮೂಲಕ ಪುಣೆಯಲ್ಲಿ ಈ ರೋಗಕ್ಕೆ ಬಲಿಯಾದವರ ಸಂಖ್ಯೆ 31ಕ್ಕೇರಿದೆ.
42ರ ಹರೆಯದ ವಿಲಾಸ್ ಪದಾಲೆ ಮತ್ತು 26ರ ಹರೆಯದ ಅನಿಲ್ ನಿಕಮ್ ಎಂಬಿಬ್ಬರು ಪ್ರತ್ಯೇಖ ಖಾಸಗಿ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ್ದಾರೆ. ಭಾನುವಾರ ರಾತ್ರಿ ಈ ಸಾವು ಸಂಭವಿಸಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಈ ಸೋಂಕು ಪತ್ತೆಯಾಗಿರುವ ಸುಮಾರು 60 ಮಂದಿ ಭಾನುವಾರ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪ್ರಸಕ್ತ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಸಮಾರು 15 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಅವರು ಹೇಳಿದ್ದಾರೆ.