ಆರ್ಎಸ್ಎಸ್‌ನ ಮಾಜಿ ಅಧ್ಯಕ್ಷ ಕೆ.ಎಸ್. ಸುದರ್ಶನ್ ಅವರು ಸೋಮವಾರ ಮುಂಜಾನೆ ಬಿಜಿಪಿಯ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರೊಂದಿಗೆ ಮುಂಜಾನೆ ಉಪಾಹಾರ ಸೇವಿಸಿದ್ದು ಪಕ್ಷದೊಳಗಿನ ವಿಚಾರಗಳು ಹಾಗೂ ಮುಂದಿನ ಯೋಜನೆ ಕುರಿತು ಚರ್ಚೆ ನಡೆಸಿದರು.
ಇದಲ್ಲದೆ, ಪ್ರಸಕ್ತ ರಾಜಕೀಯ ವಿಚಾರಗಳು ಮತ್ತು ಯುಪಿಎ ಸರ್ಕಾರದ ಕಾರ್ಯಕ್ಷಮತೆಯ ಕುರಿತು ಚರ್ಚೆ ನಡೆಸಿದರು ಎಂದು ಮೂಲಗಳು ನುಡಿದಿವೆ.
ಈ ವರ್ಷಾಂತ್ಯದ ವೇಳೆಗೆ ಮಹಾರಾಷ್ಟ್ರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಯಲ್ಲಿ ಮಹಾರಾಷ್ಟ್ರದ ಸ್ಥಿತಿಗತಿಗಳ ಕುರಿತು ಸುದರ್ಶನ್ ಅವರಿಂದ ಆಡ್ವಾಣಿ ಮಾಹಿತಿ ಪಡೆದರು ಎಂಬುದಾಗಿ ಹೇಳಲಾಗದೆ. ಬಿಜೆಪಿ ಪ್ರಧಾನಿ ಕಾರ್ಯದರ್ಶಿ(ಸಂಘಟನೆ) ರಾಮ್ ಲಾಲ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಭಾರತ ವಿಭಜನೆಗೆ ಪ್ರಮುಖ ಕಾರಣ ಎಂಬುದಾಗಿ ಆರಎಸ್ಎಸ್ ಹೇಳುತ್ತಿರುವ ಮೊಹ್ಮದ್ ಅಲಿ ಜಿನ್ನಾ ಅವರು ಅಖಂಡ ಭಾರತಕ್ಕೆ ಬದ್ಧರಾಗಿದ್ದರು ಎಂದು ಹೇಳುವ ಮೂಲಕ ಸುದರ್ಶನ್ ಅವರು ಅಚ್ಚರಿ ಮೂಡಿಸಿದ್ದರು.
ಆಡ್ವಾಣಿ ತನ್ನ ಪಾಕಿಸ್ತಾನದ ಭೇಟಿ ವೇಳೆ ಜಿನ್ನಾರನ್ನು ಹೊಗಳಿದ ಕಾರಣಕ್ಕಾಗಿ ಸ್ಥಾನತೆರವಿಗೆ ಒತ್ತಾಯಿಸಲಾಗಿದ್ದ ಸಮಯದಲ್ಲಿ ಸುದರ್ಶನ್ ಅವರು ಆರ್ಎಸ್ಎಸ್ ಅಧ್ಯಕ್ಷರಾಗಿದ್ದರು. ಸುದರ್ಶನ್ ಜಿನ್ನಾ ಕುರಿತು ಹೇಳಿಕೆ ನೀಡಿರುವ ಬಳಿಕ ಇದು ಇವರಿಬ್ಬರ ಪ್ರಥಮ ಭೇಟಿಯಾಗಿದೆ.