ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಉಗ್ರರು ಸಿಆರ್‌ಪಿಎಫ್ ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಸಾವನ್ನಪ್ಪಿದ್ದು, ಇತರ ಎಂಟು ಮಂದಿ ಗಾಯಗೊಂಡಿದ್ದಾರೆ. ರಾಜ್ಯವಿಧಾನಸಭೆಯಿಂದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿ ಈ ದಾಳಿ ನಡೆದಿದೆ.
ಸಮಾರು ಒಂದು ಗಂಟೆಯ ಸಮಾರಿಗೆ ಬಂಧೂಕು ಮತ್ತು ಗ್ರೆನೇಡುಗಳಿಂದ ಶಸ್ತ್ರಸಜ್ಜಿತರಾಗಿದ್ದ ಉಗ್ರರು ಏಕಕಾಲಕ್ಕೆ ಆವಳಿ ದಾಳಿ ನಡೆಸಿದ್ದಾರೆ. ಶ್ರೀನಗರದ ಲಾಲ್‌ಚೌಕ್‌ನ ಆಫ್ತಾಬ್ ಮಾರ್ಕೆಟ್‌ನ ಬ್ಯಾಂಕೊದರ ಹೊರಗಡೆ ಉಗ್ರರು 28ನೆ ಬೆಟಾಲಿಯನ್‌ನ ಸಿಆರ್‍ಪಿಎಫ್ ಜವಾನರಿಬ್ಬರನ್ನು ಅತಿ ಹತ್ತಿರದಿಂದ ಗುಂಡಿಕ್ಕಿ ಕೊಂದಿದ್ದಾರೆ. ಈ ಇಬ್ಬರಿಗೆ ಹಿಂದಿನಿಂದ ಗುಂಡು ಹಾರಿಸಿರುವ ಉಗ್ರರು ಬಳಿಕ ಜನಸಂದಣಿಯಲ್ಲಿ ತಪ್ಪಿಸಿಕೊಂಡು ಹೋಗಿದ್ದಾರೆ.
ಇದಾದ ಕೆಲವೇ ನಿಮಿಷಗಳಲ್ಲಿ ಉಗ್ರರು ಬಾತ್ಮಾಲು ಎಂಬಲ್ಲಿ ಸಿಆರ್‌ಪಿಎಫ್ ಗಸ್ತುಪಡೆಯ ಮೇಲೆ ಅಗ್ನಿ ಹಾಗೂ ತುರ್ತು ಸೇವಾ ಮುಖ್ಯಕಚೇಯ ಹೊರಗಡೆ ಗ್ರೆನೇಡ್ ದಾಳಿ ನಡೆಸಿದ್ದು, ಈ ವೇಳೆ ಮೂವರು ಜವಾನರು ಸೇರಿದಂತೆ ಎಂಟುಮಂದಿ ಗಾಯಗೊಂಡಿದ್ದಾರೆ.
ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಮತ್ತು ಹೆಚ್ಚುವರಿ ಪಡೆಯು ಧಾವಿಸಿದ್ದು, ಇಡಿ ಪ್ರದೇಶವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ದಾಳಿಕೋರರು ಮಾರುಕಟ್ಟೆಯಲ್ಲೇ ಅವಿತು ಕುಳಿತಿದ್ದಾರೆ ಎಂದು ಅಧಿಕಾರಿಗಳು ಊಹಿಸಿದ್ದು ಹುಡುಕಾಟ ಕಾರ್ಯ ಮುಂದುವರಿದಿದೆ.