ಉತ್ತರ ಪ್ರದೇಶದಕ್ಕೆ ಆಗಮಿಸಿರುವ ಮುಂಬೈ ಮೂಲದ ರೈಲೊಂದಲ್ಲಿ ಪತ್ತೆಯಾಗಿರುವ ಅನಾಥ ಬ್ಯಾಗೊಂದರಲ್ಲಿ ತರುಣಿಯ ಶವ ಪತ್ತೆಯಾಗಿದೆ. ಮಹಾರಾಷ್ಟ್ರ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲಿನ ಹವಾನಿಯಂತ್ರಿತ ಬೋಗಿಯ ಸೀಟೊಂದರ ಅಡಿಯಲ್ಲಿ ಇರಿಸಲಾಗಿದ್ದ ಬೃಹತ್ ಬ್ಯಾಗಿನಲ್ಲಿ ಈ ಅನಾಥ ಶವ ಪತ್ತೆಯಾಗಿದೆ.
ಟಿಕೆಟ್ ಕಲೆಕ್ಟರ್ ಅವರು ಈ ವಿಚಾರವನ್ನು ಸರ್ಕಾರಿ ರೈಲ್ವೇ ಪೊಲೀಸರಿಗೆ ಈ ವಿಚಾರ ತಿಳಿಸಿದ್ದು, ರೈಲನ್ನು ಮಥುರಾ ರೈಲ್ವೇ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ.
"ಬಾಂಬ್ ಸ್ಕ್ವಾಡ್ ಈ ಚಿಲವನ್ನು ಮೊದಲು ತೆರೆದಿದ್ದು, ಶವಕಂಡು ಬೆಚ್ಚಿಬಿದ್ದಿದ್ದಾರೆ. ಮೃತ ತರುಣಿಯು ಸುಮಾರು 15 ವರ್ಷಗಳ ಹರೆಯದವಳಂತೆ ತೋರುತ್ತದೆ" ಎಂಬುದಾಗಿ ಜಿಆರ್‌ಪಿ ಇನ್ಸ್‌ಪೆಕ್ಟರ್ ಸಂತೋಷ್ ಕುಮಾರ್ ಹೇಳಿದ್ದಾರೆ.
ತರುಣಿ ಮೃತಪಟ್ಟು ಎರಡು ದಿನಗಳು ಕಳೆದಿವೆ. ಮೃತದೇಹ ಅಥವಾ ಅದನ್ನು ಇರಿಸಿದ್ದ ಬ್ಯಾಗಿನಲ್ಲಿ ಇತರ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ. ಹುಡುಗಿಯ ಗುರುತು ಪತ್ತೆಯಾಗಿ ರೈಲು ನಿಲ್ಲುವ ಎಲ್ಲಾ ನಿಲ್ದಾಣಗಳಿಗೆ ಹುಡುಗಿಯ ಭಾವ ಚಿತ್ರವನ್ನು ಕಳುಹಿಸಲಾಗುವುದು ಎಂದು ಅವರು ಹೇಳಿದ್ದಾರೆ.
ರೈಲು ದೆಹಲಿಯ ಹಜರತ್ ನಿಜಾಮುದ್ದೀನ್ ಹಾಗೂ ಮುಂಬೈನ ಬಾಂದ್ರಾ ನಡುವೆ ಓಡಾಟ ನಡೆಸುತ್ತದೆ.