ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಾರ್ಖಂಡ್: ಇಬ್ಬರು ನಕ್ಸಲರು ಪೊಲೀಸರ ಗುಂಡಿಗೆ ಬಲಿ (Naxalites | Jharkhand | Encounter | Police)
 
ಗುಮ್ಲಾ ಜಿಲ್ಲೆಯ ಸುರಂಗ್ ಎಂಬಲ್ಲಿ ನಡೆದಿರುವ ಗುಂಡಿನ ಚಕಮಕಿಯಲ್ಲಿ ಇಬ್ಬರು ನಕ್ಸಲರು ಮಂಗಳವಾರ ಹತರಾಗಿದ್ದಾರೆ. ಸತ್ತವರನ್ನು ಬೆಂಜಮಿನ್ ಬಾಗ್ವಾರ್ ಮತ್ತು ಅಗಸ್ಟಸ್ ಭಾಗವ್ವಾರ್ ಎಂಬುದಾಗಿ ಗುರುತಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಉಪೇಂದ್ರ ಕುಮಾರ್ ಹೇಳಿದ್ದಾರೆ. ಇತರ ಮೂವರು ತಪ್ಪಿಸಿಕೊಂಡಿದ್ದಾರೆ.

ಈ ಎಲ್ಲರೂ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯ(ಪಿಎಲ್ಎಫ್ಐ) ಎಂಬ ನಕ್ಸಲ್ ಸಂಘಟನೆಯ ಕಾರ್ಯಕರ್ತರು ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳದಿಂದ ಒಂದು ಡಿಬಿಬಿಎಸ್ ಗನ್ ಮತ್ತು ಒಂದು ನಾಡಕೋವಿಯನ್ನು ವಶಪಡಿಸಿಕೊಳ್ಳಲಾಗಿದೆ.

ಕಾಮದಾರ ಕ್ಷೇತ್ರದ ಕಾಡಿನಲ್ಲಿ ಈ ನಕ್ಸಲರು ಸಭೆಸೇರಿದ್ದಾರೆ ಎಂಬ ಖಚಿತ ಮಾಹಿತಿಯಾಧಾರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಪೊಲೀಸರನ್ನು ಕಾಣುತ್ತಲೇ ನಕ್ಸಲರು ಗುಂಡುಹಾರಾಟ ಆರಂಭಿಸಿದರು. ಪ್ರತಿಯಾಗಿ ಪೊಲೀಸರೂ ಸಹ ಗುಂಡಿನ ದಾಳಿ ನಡೆಸಿದ್ದು ಈ ವೇಳೆಗಿನ ಕಾಳಗದಲ್ಲಿ ಇಬ್ಬರು ನಕ್ಸಲರು ಸ್ಥಳದಲ್ಲೇ ಸಾವನ್ನಪ್ಪಿದರು ಎಂಬುದಾಗಿ ಪೊಲೀಸಧಿಕಾರಿ ತಿಳಿಸಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ