ತಿರುವನಂತಪುರ, ಮಂಗಳವಾರ, 1 ಸೆಪ್ಟೆಂಬರ್ 2009( 18:50 IST )
ಆರರ ಹರೆಯದ ಬಾಲಕಿಯೊಬ್ಬಳು ರಾತ್ರಿ ಹಾಸಿಗೆ ಒದ್ದೆ ಮಾಡಿದಳೆಂಬ ಕಾರಣಕ್ಕೆ ಆಕೆ ವಾಸ್ತವ್ಯವಿದ್ದ ಅನಾಥಶ್ರಮದ ಸಿಬ್ಬಂದಿಯೊಬ್ಬಾಕೆ ಕಾದ ಕಬ್ಬಿಣದ ಸರಳಿನಿಂದ ಮಗುವಿಗೆ ಬರೆ ಹಾಕಿರುವ ಅಮಾನವೀಯ ಘಟನೆ ಕುರಿತು ವರದಿಯಾಗಿದೆ. ಇದರಿಂದಾಗಿ ಮಗುವಿನ ಎದೆ ಹಾಗೂ ತೋಳುಗಳು ಗಾಯಗೊಂಡಿವೆ.
ಮಗುವಿನ ತಾಯಿ ನೀಡಿರುವ ದೂರಿನಾಧಾರದಲ್ಲಿ ತಪ್ಪಿತಸ್ಥ ಸಿಬ್ಬಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗುವನ್ನು ಓಣಂ ಹಬ್ಬಕ್ಕೆ ಮನೆಗೆ ಕರೆದೊಯ್ಯಲು ಆಶ್ರಮಕ್ಕೆ ಬಂದಾಗ ತಾಯಿಗೆ ಈ ವಿಚಾರ ಗೊತ್ತಾಗಿದೆ.
ಮಗುವಿನ ಮೈಮೇಲಿದ್ದ ಗಾಯವನ್ನು ಕಂಡು, ಇದೇನಾಯಿತು ಎಂದು ತಾಯಿ ಪ್ರಶ್ನಿಸಿದಾಗ, ತಾನು ಹಾಸಿಗೆ ಒದ್ದೆ ಮಾಡಿದ್ದಕ್ಕೆ ತನಗೆ ಸಿಬ್ಬಂದಿಗಳು ಶಿಕ್ಷಿಸಿದ್ದಾಗಿ ತಿಳಿಸಿದಳು.
ಆದರೆ, ಈ ಆಪಾದನೆಯನ್ನು ತಳ್ಳಿಹಾಕಿರುವ ಸೈಂಟ್ ಜೋಸೆಫ್ ಸಾಯಿ ಮಾಥಾ ಅನಾಥಾಲಯದ ಅಧಿಕಾರಿಗಳು ಮಗುವಿನ ಮೇಲೆ ಬಿಸಿ ಚಹಾಬಿದ್ದಕಾರಣ ಗಾಯ ಉಂಟಾಗಿದೆ ಎಂಬ ಸಮಜಾಯಿಷಿ ನೀಡಿದ್ದಾರೆ.