ಭಾರತದ ಕ್ಷಿಪಣಿ ಕಾರ್ಯಕ್ರಮಗಳ ಹಿಂದಿನ ಮಿದುಳುಗಳ ಪೈಕಿ ಒಂದಾಗಿರುವ ವಿಜಯ ಕುಮಾರ್ ಸಾರಸ್ವತ್ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ನೂತನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
39ವರ್ಷ ಕಾಲ ಡಿಆರ್‌ಡಿಒದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎಂ.ನಟರಾಜನ್ ಅವರ ಸ್ಥಾನವನ್ನು 60ರ ಹರೆಯದ ಸಾರಸ್ವತ್ ಅಲಂಕರಿಸಿದ್ದಾರೆ. ಡಿಆರ್‌ಜಿಒದ ಪ್ರಧಾನ ನಿರ್ದೇಶಕ ಮತ್ತು ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡಿರುವ ಸಾರಸ್ವತ್ ಇನ್ನು ರಕ್ಷಣಾ ಸಚಿವ ಎ.ಕೆ.ಆಂಟನಿ ಅವರ ವೈಜ್ಞಾನಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.