ಕನ್ನಡದ ಮೇರುನಟ ಡಾ.ರಾಜ್ ಕುಮಾರ್ ಅವರು 20 ವರ್ಷಕ್ಕೂ ಹೆಚ್ಚು ಬಾಳಿ ಬದುಕಿದ್ದ ಸದಾಶಿವನಗರದ ಮನೆ ಶೀಘ್ರದಲ್ಲೇ ನೆಲಸಮವಾಗಲಿದೆ. ರಾಜ್ ಕುಟುಂಬ ವರ್ಗ ತಮ್ಮ ಹಳೇ ಮನೆಯನ್ನು ನವೀಕರಿಸಲು ತೀರ್ಮಾನಿಸಿದ್ದು, ಈಗಿರುವ ಮನೆ ಜಾಗದಲ್ಲಿ ನಾಲ್ಕಂತಸ್ತಿನ ಭಾರೀ ಭವ್ಯ ಬಂಗಲೆ ನಿರ್ಮಾಣವಾಗಲಿದೆ ಎಂದು ಮೂಲಗಳು ತಿಳಿಸಿವೆ.