ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೆಲಿಕಾಪ್ಟರ್ ಪತನ; ಸುಟ್ಟುಕರಕಲಾದ ಮೃತ ದೇಹಗಳು (Rajasekhara Reddy | Chopper missing | Karnool)
 
ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಸೇರಿದಂತೆ ಐವರು ಹೆಲಿಕಾಪ್ಟರ್ ದುರಂತದಲ್ಲಿ ದುರ್ಮರಣ ಹೊಂದಿರುವುದಾಗಿ ಕಾಂಗ್ರೆಸ್ ಮೂಲಗಳು ಖಚಿತಪಡಿಸಿವೆ. ಮೃತರೆಲ್ಲರ ದೇಹಗಳು ಸುಟ್ಟುಕರಕಲಾಗಿವೆ.

ತೀವ್ರ ಶೋಧ ಕಾರ್ಯಾಚರಣೆ ನಂತರ ಗುರುವಾರ ಬೆಳಿಗ್ಗೆ 9.50ಕ್ಕೆ ಸಿಎಂ ರಾಜಶೇಖರ ರೆಡ್ಡಿ ಸೇರಿದಂತೆ ಹೆಲಿಕಾಪ್ಟರ್‌ನಲ್ಲಿದ್ದ ಐವರ ಮೃತದೇಹಗಳು ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ವಾಯುಪಡೆ ದೃಢಪಡಿಸಿದೆ.

60ರ ಹರೆಯದ ರೆಡ್ಡಿ ಅವರೊಂದಿಗೆ ಅವರ ಪ್ರಧಾನ ಕಾರ್ಯದರ್ಶಿ ಎಸ್. ಸುಬ್ರಮಣಿಯನ್, ಮುಖ್ಯ ಭದ್ರತಾ ಅಧಿಕಾರಿ ಎ.ಎಸ್.ಸಿ. ವೆಸ್ಲಿ, ಪೈಲಟ್‌ಗಳಾದ ಎಸ್.ಕೆ. ಭಾಟಿಯಾ ಹಾಗೂ ಎಂ.ಎಸ್. ರೆಡ್ಡಿ ಅವರುಗಳು ಪ್ರಯಾಣಿಸುತ್ತಿದ್ದು, ಇವರೆಲ್ಲರ ದೇಹಗಳು ರುದ್ರಕೊಂಡ ಬೆಟ್ಟದಲ್ಲಿ ಸುಟ್ಟು ಕರಕಲಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್ ಛಿದ್ರಛಿದ್ರವಾಗಿದೆ.

ಅವರನ್ನು ಹೊತ್ತೊಯ್ಯುತ್ತಿದ್ದ ಅವಳಿ ಎಂಜಿನ್‌ನ ಬೆಲ್ 430 ಹೆಲಿಕಾಫ್ಟರ್ ಪ್ರತಿಕೂಲ ವಾತವರಣದಿಂದಾಗಿ ಅಪಘಾತಕ್ಕೀಡಾಗಿದೆ.

ಸೇನಾ ಕಮಾಂಡೋಗಳು ಐದು ಮಂದಿಯ ದೇಹಗಳನ್ನು ಪತ್ತೆ ಹಚ್ಚಿದ್ದಾರೆ. ಭಾರತೀಯ ವಾಯುಪಡೆಯ ಹೆಲಿಕಾಫ್ಟರ್ ಗುರುವಾರ ಮುಂಜಾನೆ ಛಿದ್ರವಾಗಿದ್ದ ಹೆಲಿಕಾಫ್ಟರ್‌ನ ಅವಶೇಷಗಳನ್ನು ಪತ್ತೆ ಹಚ್ಚಿತ್ತು. ಕರ್ನೂಲ್‌ನಿಂದ ಪೂರ್ವಕ್ಕೆ 70 ಕಿಲೋಮೀಟರ್ ದೂರದಲ್ಲಿ ರುದ್ರಕೋಟೆ ಬೆಟ್ಟದ ಮೇಲೆ ಹೆಲಿಕಾಪ್ಟರ್ ಅವಶೇಷ ಹಾಗೂ ಮೃತದೇಹಗಳು ಪತ್ತೆಯಾಗಿವೆ.

ಕೆಟ್ಟ ಹವಾಮಾನ ಹಾಗೂ ಮೋಡ ಮುಸುಕಿದ ವಾತಾವರಣದಿಂದಾಗಿ ಶೋಧಕಾರ್ಯಕ್ಕೆ ಅಡ್ಡಿಯಾದ ಕಾರಣ ಬುಧವಾರ ರಾತ್ರಿಯಾದ ಬಳಿಕ ಹೆಲಿಕಾಫ್ಟರ್‌ಗಳು ತಮ್ಮ ಶೋಧಕಾರ್ಯವನ್ನು ನಿಲ್ಲಿಸಿದ್ದವು. ಇದು ದಕ್ಷಿಣ ಭಾರತದಲ್ಲೇ ಅತಿದೊಡ್ಡ ಗುಡ್ಡಪ್ರದೇಶವಾಗಿದ್ದು, ದಟ್ಟಾರಣ್ಯದಿಂದ ಕೂಡಿರಿವುದು ಶೋಧಕಾರ್ಯಕ್ಕೆ ನಿನ್ನೆ ಅಡ್ಡಿಯಾಗಿತ್ತು.

ಸೇನಾಧಿಕಾರಿಗಳು, ತಜ್ಞರು ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲಿದ್ದರೂ ಮೇಲಕ್ಕೆತ್ತುವಂತಹ ತಂತ್ರಜ್ಞಾನವುಳ್ಳ ಸಿಬ್ಬಂದಿಗಳೂ ವಾಯುಪಡೆಯ ವಿಮಾನದಲ್ಲಿ ಅಪಘಾತ ಸ್ಥಳಕ್ಕೆ ತೆರಳಿದ್ದರು.

ಚೆನ್ನೈನಿಂದ ಆಗಮಿಸಿದ್ದ ಹೆಲಿಕಾಫ್ಟರ್‌ಗಳು
ಈ ಮಧ್ಯೆ ಚೆನ್ನೈನಿಂದಲೂ ಎರಡು ಸುರಕ್ಷಾ ಹೆಲಿಕಾಫ್ಟರ್‌ಗಳು ಆಗಮಿಸಿದ್ದು ಇದರಲ್ಲಿ ಸುಮಾರು 40 ಸೇನಾ ತಜ್ಞರು ಸ್ಥಳಕ್ಕೆ ತೆರಳಿದ್ದರು. ಇದಲ್ಲದೆ ಪಕ್ಷದ ಕಾರ್ಯಕರ್ತರು, ಅಂಬ್ಯುಲೆನ್ಸ್, ಪತ್ರಕರ್ತರು ಜನಸಾಮಾನ್ಯರು ಸ್ಥಳಕ್ಕೆ ಧಾವಿಸಿದ್ದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ