ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪತ್ತೆ ಸ್ಥಳದಲ್ಲಿ ಪರಿಹಾರ ಹೆಲಿಕಾಫ್ಟರ್‌ಗಳಿಗೆ ಇಳಿಯಲಾಗುತ್ತಿಲ್ಲ (YS Rajasekhara Reddy | Andhra Pradesh | Chief Minister | Hyderabad)
ಪತ್ತೆ ಸ್ಥಳದಲ್ಲಿ ಪರಿಹಾರ ಹೆಲಿಕಾಫ್ಟರ್‌ಗಳಿಗೆ ಇಳಿಯಲಾಗುತ್ತಿಲ್ಲ
ಹೈದರಾಬಾದ್, ಗುರುವಾರ, 3 ಸೆಪ್ಟೆಂಬರ್ 2009( 10:16 IST )
ಆಂಧ್ರಮುಖ್ಯಮಂತ್ರಿ ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್‌ನ ಅವಶೇಷಗಳು ಪತ್ತೆಯಾಗಿವೆ ಎಂದು ಹೇಳಲಾಗಿರುವ ರುದ್ರಪುರ ಗೊಂಡಾರಣ್ಯದಲ್ಲಿ ಪರಿಹಾರಕ್ಕಾಗಿ ಧಾವಿಸಿರುವ ಹೆಲಿಕಾಫ್ಟರ್‌ಗಳು ಇಳಿಯಲು ಸಾಧ್ಯವಾಗದೆ ಮೇಲ್ಗಡೆಯೇ ಸುತ್ತಾಡುತ್ತಿದ್ದು ಮುಂದಿನ ಕಾರ್ಯಚರಣೆಗಾಗಿ ತಂತ್ರ ರೂಪಿಸುತ್ತಿವೆ.
ಇದರಿಂದಾಗಿ ಅದು ಸುರಕ್ಷಿತವಾಗಿ ಕೆಳಗಿಳಿದಿತ್ತು ಎಂಬ ಊಹೆಗಳು ಸುಳ್ಳಾಗುತ್ತಿರುವ ಲಕ್ಷಣಗಳು ಕಂಡು ಬರುತ್ತಿವೆ. ಒಂದೊಮ್ಮೆ ಹೆಲಿಕಾಫ್ಟರ್ ಅನ್ನು ಪೈಲಟ್ ಸುರಕ್ಷಿತ ಜಾಗದಲ್ಲಿ ಲ್ಯಾಂಡ್ ಮಾಡಿದ್ದಲ್ಲಿ ಇತರ ಹೆಲಿಕಾಫ್ಟರ್‌ಗಳೂ ಅಲ್ಲಿ ಇಳಿಯಲು ಅವಕಾಶವಾಗುತ್ತಿತ್ತು ಎಂದು ತರ್ಕಿಸಲಾಗಿದೆ. ಅಲ್ಲಿನ ಕಾಡಿನ ದಟ್ಟಣೆ ಮತ್ತು ಗೊಂಡಾರಣ್ಯವನ್ನು ಕಂಡಲ್ಲಿ ಅವರ ಹೆಲಿಕಾಫ್ಟರ್ ಬಹುತೇಕ ಕ್ರಾಶ್ ಆಗಿದ್ದು ಅದರಲ್ಲಿದ್ದವರು ಬದುಕುಳಿದಿರುವ ಸಾಧ್ಯತೆಗಳು ಬಹಳ ಕಡಿಮೆ ಎನ್ನಲಾಗಿದೆ.
ಇದೀಗ ರಕ್ಷಣಾ ಕಾರ್ಯಕ್ಕೆ ತೆರಳಿರುವ ಕಮಾಂಡೋಗಳನ್ನು ಹಗ್ಗದಿಂದ ಇಳಿಸಿ ಹೆಲಿಕಾಫ್ಟರ್‌ನಲ್ಲಿದ್ದವರ ಸ್ಥಿತಿಗತಿಗಳ ಕುರಿತು ಪತ್ತೆಮಾಡಬೇಕಿದೆ. ಮುಂಬೈ ಮೇಲೆ ಉಗ್ರರು ದಾಳಿ ನಡೆಸಿದ ವೇಳೆ ಕಮಾಂಡೋಗಳನ್ನು ಸ್ಥಳಕ್ಕೆ ಇಳಿಸಿದ ಮಾದರಿಯಲ್ಲೇ ಇಲ್ಲೂ ಸಹ ಕಾರ್ಯಾಚರಣೆ ನಡೆಸಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎನ್ನಲಾಗಿದೆ.