ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ (Andhra CM | YSR | Cremation | Native town)
 
WD
ಹೆಲಿಕಾಫ್ಟರ್ ಅಪಘಾತದಲ್ಲಿ ದುರ್ಮರಣಕ್ಕೀಡಾಗಿರುವ ಆಂಧ್ರಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಅವರ ಅಂತ್ಯಕ್ರಿಯೆ ಶುಕ್ರವಾರ ಅವರ ಹುಟ್ಟೂರಾದ ಕಡಪ್ಪಾದ ಪುಲಿವೆಂದುಲಾದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಲಿದೆ.

ನಲ್ಲಮುಲ್ಲಾ ಕಾಡಿನಲ್ಲಿ ಪತ್ತೆಯಾಗಿರುವ ಎಲ್ಲಾ ಐದೂ ದೇಹಗಳ ಮರಣೋತ್ತರ ಪರೀಕ್ಷೆಯನ್ನು ಹೈದರಾಬಾದಿನಲ್ಲಿ ನಡೆಸಿದ ಬಳಿಕ ಮುಖ್ಯಮಂತ್ರಿಗಳ ಮೃತದೇಹವನ್ನು ಬೇಗಂಪೇಟೆಯಲ್ಲಿರುವ ಅವರ ಕಚೇರಿಗೆ ಒಯ್ಯಲಾಗುವುದು. ಇತರ ನಾಲ್ವರ ಮೃತದೇಹಗಳನ್ನು ಅವರವರ ಊರಿಗೆ ಕಳುಹಿಸಲಾಗುವುದು ಎಂದು ಉಸ್ತುವಾರಿ ಮುಖ್ಯಮಂತ್ರಿಯಾಗಿರುವ ಹಣಕಾಸು ಸಚಿವ ರೋಸಯ್ಯ ಅವರು ತಿಳಿಸಿದ್ದಾರೆ.

ರೆಡ್ಡಿ ಅವರ ಪಾರ್ಥೀವ ಶರೀರವನ್ನು ಶುಕ್ರವಾರ ಮುಂಜಾನೆ 10 ಗಂಟೆಯ ಬಳಿಕ ಹೈದರಾಬಾದಿನ ಲಾಲ್ ಬಹಾದ್ದೂರ್ ಕ್ರಿಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಇತರ ಹಲವಾರು ಕೇಂದ್ರ ಸಚಿವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಂಭವವಿದೆ.

ಶುಕ್ರವಾರ ಮಧ್ಯಾಹ್ನ ಒಂದು ಗಂಟೆಗೆ ಅವರ ದೇಹವನ್ನು ಪುಲಿವೇಂದುಲಕ್ಕೆ ಒಯ್ದು ಅಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ರೋಸಯ್ಯ ತಿಳಿಸಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ