ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವೈಎಸ್ಆರ್ ಅಮರ್ ರಹೇ....ಮುಗಿಲು ಮುಟ್ಟಿದ ಆಕ್ರಂದನ (Andhra | Mourn | YSR | crash)
 
WD
ಆಂಧ್ರಪ್ರದೇಶದ ಜನನಾಯಕ ವೈ.ಎಸ್. ರಾಜಶೇಖರ ರೆಡ್ಡಿ ಅವರ ಅಕಾಲ ಮರಣದಿಂದಾಗಿ ಇಡಿಯ ಆಂಧ್ರಕ್ಕೆ ಆಂಧ್ರವೇ ಶೋಕ ತಪ್ತವಾಗಿದೆ. ರಾಷ್ಟ್ರಾದ್ಯಂತ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದರೂ, ತಾವು ಹತ್ತಿರದಿಂದ ಕಂಡ ನಾಯಕ ಇದ್ದಕ್ಕಿದ್ದಂತೆ ಕಣ್ಮರೆಯಾಗಿರುವ ಆಘಾತವನ್ನು ಭರಿಸಿಕೊಳ್ಳುವುದು ಆಂಧ್ರದ ಮಂದಿಗೆ ಅತ್ಯಂತ ಕಷ್ಟಮಯವಾಗಿದೆ.

ಮುಖ್ಯಮಂತ್ರಿಯವರ ಪಾರ್ಥೀವ ಶರೀರವು ಕರ್ನೂಲ್‌ಗೆ ಆಗಮಿಸುತ್ತಿರುವಂತೆಯೇ ತಮ್ಮ ನೆಚ್ಚಿನ ನಾಯಕನ ಅಂತಿಮ ದರ್ಶನಕ್ಕಾಗಿ ಜನರು ಮುಗಿಬಿದ್ದಿದ್ದು, ಭದ್ರತಾ ಸಿಬ್ಬಂದಿಗಳು ಜನಸಾಗರವನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.

ಹೈದರಾಬಾದಿನಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಕಾಂಗ್ರೆಸ್ ಕಚೇರಿಯ ಎದುರುಗಡೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ಜಮಾಯಿಸಿದ್ದಾರೆ. ಇತ್ತ ಮುಖ್ಯಮಂತ್ರಿಗಳ ನಿವಾಸದ ಬಳಿಯಲ್ಲಿ ರಸ್ತೆಗಳೆಲ್ಲ ಬಂದ್ ಆಗಿದೆ. ಎಲ್ಲೆಡೆಯೂ ಜನತೆ ಅಗಲಿದ ನಾಯಕನನ್ನು ನೆನೆ ನೆನೆದು ಬಿಕ್ಕಿಬಿಕ್ಕಿ ಅಳುತ್ತಿದ್ದಾರೆ. ಜನತೆಯು ತಮ್ಮ ಪ್ರೀತಿಯ ನಾಯಕ ಚಿತ್ರವಿರುವ ಭಿತ್ತಿಚಿತ್ರದ ಪ್ರದರ್ಶನ ಮಾಡುತ್ತಿದ್ದಾರೆ. ಹೆಂಗಸರು, ಗಂಡಸರು, ಯುವಕರೆನ್ನದೆ ಜನತೆ ತಮ್ಮ ದುಃಖ ತೋಡಿಕೊಳ್ಳುತ್ತಿರುವ ದೃಶ್ಯ ಎಲ್ಲೆಡೆ ಸಹಜ ಎಂಬಂತೆ ತೋರಿಬರುತ್ತಿದೆ.

ರಾಜಶೇಖರ ರೆಡ್ಡಿ ಅವರ ಮೃತದೇಹವನ್ನು ಹೈದರಾಬಾದಿನ ಲಾಲ್ ಬಹಾದೂರ್ ಶಾಸ್ತ್ರಿ ಕ್ರಿಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು.

ದೆಹಲಿ ಹಾಗೂ ಎಲ್ಲಾ ರಾಜ್ಯಗಳ ರಾಜಧಾನಿಯಲ್ಲಿ ರಾಷ್ಟ್ರಧ್ವಜವನ್ನು ಅರೆಮಟ್ಟಕ್ಕೆ ಇಳಿಸಲಾಗುವುದು. ಆಂಧ್ರಪ್ರದೇಶದಲ್ಲಿ ಸೆಪ್ಟೆಂಬರ್ ನಾಲ್ಕರಂದು ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗುವುದು. ಕರ್ನಾಟಕ ಹಾಗೂ ತಮಿಳ್ನಾಡುಗಳಲ್ಲೂ ಶೋಕಾಚರಣೆ ಪ್ರಯುಕ್ತ ಸರ್ಕಾರಿ ರಜೆ ಸಾರಲಾಗಿದೆ.

ಅವರ ಅಂತ್ಯಕ್ರಿಯೆ ಶುಕ್ರವಾರ ಎಲ್ಲಾ ಸರ್ಕಾರಿ ಮರ್ಯಾದೆಯೊಂದಿಗೆ ಅವರ ಹುಟ್ಟೂರಾದ ಪುಲಿವೆಂದುಲದಲ್ಲಿ ನಡೆಯಲಿದೆ.

ಪೂರಕ ಓದಿಗೆ:-
ಪ್ರತಿಭಾ, ಸೋನಿಯಾ, ಪ್ರಧಾನಿಯವರಿಂದ ಸಂತಾಪ
ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ
ಹಾದಿತಪ್ಪಿದ ಹೆಲಿಕಾಫ್ಟರ್ ಬೆಟ್ಟಕ್ಕೆ ಬಡಿದು ಸ್ಫೋಟ
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ