ವಾಣಿಜ್ಯ ನಗರಿ ಮುಂಬೈಯಲ್ಲಿ 26/11ರ ಭಯೋತ್ಪಾದಕರ ದಾಳಿಯ ಹಿನ್ನೆಲೆಯಲ್ಲಿ, ಸಾರಿಗೆ ಇಲಾಖೆಯು ನಗರದ ನೂತನ ಸಿಟಿಬಸ್‌ಗಳಿಗೆ ಗುಂಡು ಹಾಗೂ ಸ್ಫೋಟ ನಿರೋಧಕ ಗಾಜುಗಳನ್ನು ಅಳವಡಿಸಲು ನಿರ್ಧರಿಸಿದೆ.
ಪ್ರಯಾಣಿಕರ ಸುರಕ್ಷತೆಯ ಉದ್ದೇಶದಿಂದ ದೇಶದಲ್ಲಿಯೇ ಮೊದಲ ಬಾರಿಗೆ ಮುಂಬೈನ ಸಾರ್ವಜನಿಕ ಬಸ್‌ಗಳು ಗುಂಡು, ಸ್ಫೋಟ ಮತ್ತು ಬೆಂಕಿ ನಿರೋಧಕ ಕಿಟಕಿ ಗಾಜುಗಳನ್ನು ಹೊಂದಲಿದೆ. ಬಸ್‌ಗಳಿಗೆ ಈ ನಿರೋಧಕ ಗಾಜುಗಳನ್ನು ಅಳವಡಿಸುವ ಜವಾಬ್ದಾರಿ ಹೊತ್ತಿರುವ ಕಂಪೆನಿಯ ಅಧಿಕಾರಿ ಹರ್ವಿಂದರ್ ಸೂರಿ ತಿಳಿಸಿದ್ದಾರೆ.
ಉಗ್ರರ ದಾಳಿ ಸೇರಿದಂತೆ ನಗರದಲ್ಲಿ ಹಲವಾರು ಅಹಿತಕರ ಘಟನೆಗಳು ಈ ಹಿಂದೆ ಸಾಕಷ್ಟು ನಡೆದಿದೆ. ಇಂತಹ ಘಟನೆಗಳು ನಡೆದಾಗ ಗುಂಡು ನಿರೋಧಕ ಗಾಜುಗಳು ಸಾರ್ವಜನಿಕರ ಪ್ರಾಣ ರಕ್ಷಣೆಗೆ ನೆರವಾಗುತ್ತದೆ ಎಂದು ಬೆಸ್ಟ್ ಅಧೀನ ಸಮಿತಿಯ ಅಧ್ಯಕ್ಷ ದಿಲೀಪ್ ಪಟೇಲ್ ಹೇಳಿದರು.
ಬೆಸ್ಟ್‌ನ 250 ಕಿಂಗ್-ಲಾಂಗ್ ಮತ್ತು 20 ಹವಾನಿಯಂತ್ರಿತ ಬಸ್‌ಗಳಿಗೆ ಗುಂಡು ನಿರೋಧಕ ಗಾಜುಗಳನ್ನು ಅಳವಡಿಸುವ ಪ್ರಸ್ತಾಪವನ್ನು ಬೃಹತ್ ಮುಂಬೈ ಎಲೆಕ್ಟ್ರಿಕ್ ಟ್ರಾನ್ಸ್‌ಪೋರ್ಟ್‌ನ ಅಧೀನ ಸಮಿತಿ ಈಗಾಗಲೇ ಅಂತಿಮಗೊಳಿಸಿದೆ.