ಹೈದರಾಬಾದ್, ಶುಕ್ರವಾರ, 4 ಸೆಪ್ಟೆಂಬರ್ 2009( 08:59 IST )
WD
WD
ಆಂಧ್ರಪ್ರದೇಶದ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೆ ಕಾರಣವಾದ ಘಟನೆಗಳ ಸರಮಾಲೆ ಇನ್ನೂ ಸ್ಪಷ್ಟವಾಗಿರದಿದ್ದರೂ, ಹೆಲಿಕಾಪ್ಟರ್‌ಗೆ ಸಿಡಿಲು ಬಡಿದು ಹಾರಾಟಕ್ಕೆ ಅಡ್ಡಿಯಾಗಿರಬಹುದೆಂದು ಮೂಲಗಳು ಸಂಶಯ ವ್ಯಕ್ತಪಡಿಸಿವೆ. ಸಿಡಿಲಿನಿಂದ ಹೆಲಿಕಾಪ್ಟರ್ ಪತನಗೊಂಡಿರದಿದ್ದರೂ, ಆಲ್ಟಿಮೀಟರ್ ಸೇರಿದಂತೆ ಆನ್‌ಬೋರ್ಡ್ ವ್ಯವಸ್ಥೆ ಅಸ್ತವ್ಯಸ್ತವಾಗಿರಬಹುದು.
ಹೆಲಿಕಾಪ್ಟರ್ ಕೆಳಗಿನ ಭೂಮಿಯನ್ನು ವೀಕ್ಷಿಸಿ ಹಾರಾಟ ನಡೆಸುತ್ತದೆ. ಆದರೆ ಸತತ ಮಳೆಯಿಂದ ದೃಷ್ಟಿಗೋಚರತೆ ಸೊನ್ನೆಗೆ ಕುಸಿದಿದ್ದರಿಂದ ಅದು ಸಾಧ್ಯವಾಗಲಿಲ್ಲ. ಆಲ್ಟಿಮೀಟರ್ ವಿಫಲವಾದಾಗ ಪೈಲಟ್‌ಗೆ ತಾನು ಹಾರಾಟ ನಡೆಸುವ ಸ್ಥಳದ ಬಗ್ಗೆ ಸುಳಿವು ಸಿಕ್ಕುವುದಿಲ್ಲ.ಆದ್ದರಿಂದ ತೀರಾ ಕೆಳಗೆ ಹಾರುತ್ತಿದ್ದ ಹೆಲಿಕಾಪ್ಟರ್ ಹಾರಾಟದ ಪಥದಿಂದ 18 ಕಿಮೀ ದೂರ ಅಡ್ಡದಾರಿ ಹಿಡಿಯಲು ಕೆಲವೇ ನಿಮಿಷಗಳನ್ನು ತೆಗೆದುಕೊಂಡು ನಲ್ಲಮಲ್ಲ ಅರಣ್ಯದಲ್ಲಿ ಬಂಡೆಯ ಕಡಿದಾದ ಭಾಗಕ್ಕೆ ಡಿಕ್ಕಿಹೊಡೆದು ಸ್ಫೋಟಿಸಿ ಚೂರು ಚೂರಾಯಿತೆಂದು ಹೇಳಲಾಗಿದೆ.
ಹೆಲಿಕಾಪ್ಟರ್‌ನಲ್ಲಿ ಮುಖ್ಯಮಂತ್ರಿ ಸೇರಿ ಐದು ಮಂದಿಯೂ ಸತ್ತಿದ್ದು, ಅವರ ದೇಹಗಳು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿದೆ. ಮೃತರ ಉಡುಪುಗಳ ಆಧಾರದ ಮೇಲೆ ದೇಹಗಳನ್ನು ಗುರುತಿಸಲಾಗಿದೆ.ಭಾರೀ ಮಳೆ ಮತ್ತು ಸಿಬಿ ಮೋಡಗಳ ರಚನೆಯ ಬಗ್ಗೆ ಹವಾಮಾನದ ಮುನ್ಸೂಚನೆ ನೀಡಲಾಗಿತ್ತು.
ಮುಖ್ಯಮಂತ್ರಿಗಳ ಕಚೇರಿಯಿಂದ ಹವಾಮಾನ ವರದಿ ತರಿಸಿಕೊಳ್ಳಲಾಗಿತ್ತು. ಪೈಲಟ್‌ಗಳು ಹೆಲಿಕಾಪ್ಟರ್ ಹಾರಾಟಕ್ಕೆ ನಿರಾಕರಿಸಬಹುದಿತ್ತು. ಆದರೆ ಅತೀ ಗಣ್ಯರ ಉಪಸ್ಥಿತಿಯಿಂದ ಅವರ ಬಾಯಿ ಕಟ್ಟಿತು ಎಂದು ಮೂಲಗಳು ತಿಳಿಸಿವೆ.