ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಿಎಂ, ಸೋನಿಯಾ, ರಾಹುಲ್‌ರಿಂದ ರೆಡ್ಡಿಗೆ ಅಂತಿಮ ನಮನ (PM | Sonia | Rahul | YSR)
 
ಪ್ರಧಾನಿ ಮನಮೋಹನ್ ಸಿಂಗ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರುಗಳು ಶುಕ್ರವಾರ ಮುಂಜಾನೆ ಹೈದರಾಬಾದ್‌ನಲ್ಲಿರುವ ವೈ.ಎಸ್. ರಾಜಶೇಖರ ರೆಡ್ಡಿ ಅವರ ನಿವಾಸಕ್ಕೆ ತೆರಳಿ ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.

ರೆಡ್ಡಿ ಅವರು ಬುಧವಾರ ಸಂಭವಿಸಿರುವ ಹೆಲಿಕಾಫ್ಟರ್ ಅಪಘಾತದಲ್ಲಿ ಇತರ ನಾಲ್ವರೊಂದಿಗೆ ಸಾವನ್ನಪ್ಪಿದ್ದಾರೆ.

ಸೋನಿಯಾರೊಂದಿಗೆ ಇತರ ಕಾಂಗ್ರೆಸ್ ಮುಖಂಡರಾದ ಪೃಥ್ವಿರಾಜ್ ಚೌವಾಣ್, ವೀರಪ್ಪ ಮೊಯ್ಲಿ ಹಾಗೂ ಇತರ ನಾಯಕರು ರೆಡ್ಡಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಇದಲ್ಲದೆ ಹಲವಾರು ಕಾಂಗ್ರೆಸ್ ಮುಖ್ಯಮಂತ್ರಿಗಳು ಹೈದರಾಬಾದಿಗೆ ಆಗಮಿಸಿ ದುರಂತ ಮರಣ ಕಂಡ ರೆಡ್ಡಿಯವರಿಗೆ ಅಂತಿಮ ಗೌರವ ಸಲ್ಲಿಸಲು ಹೈದರಾಬಾದಿಗೆ ಆಗಮಿಸಿದ್ದಾರೆ.

ಶುಕ್ರವಾರ ಸಾಯಂಕಾಲದ ವೇಳೆ ಕಡಪ್ಪಾ ಜಿಲ್ಲೆಯ ಪುಲಿವೆಂದುಲದಲ್ಲಿ ವೈಎಸ್ಆರ್ ಅವರ ಅಂತಿಮ ಸಂಸ್ಕಾರ ನಡೆಯಲಿದೆ.

ಅಂತಿಮ ಮೆರವಣಿಗೆ
ಹೈದರಾಬಾದಿನ ರೆಡ್ಡಿ ನಿವಾಸದಿಂದ ಇದೀಗ ಅವರ ಪಾರ್ಥೀವ ಶರೀರವನ್ನು ಲಾಲ್ ಬಾಹದೂರ್ ಶಾಸ್ತ್ರಿ ಕ್ರೀಡಾಂಗಣಕ್ಕೆ ಒಯ್ಯಲಾಗುತ್ತಿದೆ. ತೆರೆದ ವಾಹನದಲ್ಲಿ ಸಾಗುತ್ತಿರುವ ಈ ಅಂತಿಮ ಯಾತ್ರೆಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದಾರೆ. ಜನತೆ ಎಲ್ಲೆಂದರಲ್ಲಿ ರೆಡ್ಡಿಯವರನ್ನು ಕಣ್ಣಲ್ಲಿ ಕಾಣಬಹುದೇ ಎಂಬುದಾಗಿ ಸುತ್ತಮುತ್ತಲ ಕಡ್ಡಗಳು ಎತ್ತರ ಪ್ರದೇಶದ ಮೇಲೆ ಏರಿ ನಿಂತಿದ್ದಾರೆ. ಕ್ರೀಡಾಂಗಣದಲ್ಲಿ ಮಧ್ಯಾಹ್ನದ ತನಕ ಸಾರ್ವಜನಿಕರ ವೀಕ್ಷಣೆಗೆ ಮೃತದೇಹವನ್ನು ಇರಿಸಲಾಗಿದೆ.

ಲಾಲ್ ಬಹಾದೂರ್ ಶಾಸ್ತ್ರಿ ಕ್ರೀಡಾಂಗಣದಿಂದ ಬಳಿಕ ಮೃತದೇಹವನ್ನು ಕಡಪ್ಪಾ ಜಿಲ್ಲೆಯ ಪುಲಿವೆಂದುಲಾಕ್ಕೆ ಮಧ್ಯಾಹ್ನಕ್ಕೆ ಒಯ್ಯಲಾಗಿ ಅಲ್ಲಿ ಅವರ ಅಂತಿಮ ಸಂಸ್ಕಾರ ನಡೆಸಲಾಗುವುದು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ