ಹೈದರಾಬಾದ್, ಶುಕ್ರವಾರ, 4 ಸೆಪ್ಟೆಂಬರ್ 2009( 16:05 IST )
WD
ಹಠಾತ್ ಕಣ್ಮರೆಯಾದ ಆಂಧ್ರಪ್ರದೇಶ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಅವರ ಪಾರ್ಥೀವ ಶರೀರವು ಅಂತ್ಯ ಸಂಸ್ಕಾರದ ಸ್ಥಳವಾಗಿರುವ ಇಡುಪುಲಪಾಯಕ್ಕೆ ತಲುಪಿದೆ. ತ್ರಿವರ್ಣ ಬಾವುಟವನ್ನು ಹೊದಿಸಿರುವ ಅವರ ಶವವನ್ನು ಸೇನಾ ಹೆಲಿಕಾಫ್ಟರ್‌ನಲ್ಲಿ ಹೈದರಾಬಾದಿನಿಂದ ಇಲ್ಲಿಗೆ ತರಲಾಗಿದೆ.
ಲಕ್ಷಾಂತರ ಮಂದಿ ಇಲ್ಲಿ ಜಮಾಯಿಸಿದ್ದು, ಅಂತ್ಯಸಂಸ್ಕಾರಕ್ಕೆ ಸಾಕ್ಷಿಯಾಗಲಿದ್ದಾರೆ. ಜನರು ಶಾಂತಿಯಿಂದ ವರ್ತಿಸಿ ಶಾಂತಿಯುತವಾಗಿ ಕಾರ್ಯಕ್ರಮ ನೆರವೇರಲು ಸಹಕರಿಸಬೇಕು ಎಂಬುದಾಗಿ ಪದೇಪದೇ ವಿನಂತಿಸಲಾಗುತ್ತಿದೆ. ಜನತೆ ಅಂತ್ಯಸಂಸ್ಕಾರದ ಸ್ಥಳಕ್ಕೆ ತೆರಳಲು ನುಗ್ಗಾಟ ನಡೆಸದೆ, ನಿಂತಲ್ಲಿಂದಲೇ ಶ್ರದ್ಧಾಂಜಲಿ ಅರ್ಪಿಸಬೇಕು ಎಂದು ಮುಗಿ ಬೀಳುವ ಜನತೆಗೆ ವಿನಂತಿಸಲಾಗುತ್ತಿದೆ.
ಅವರ ಹುಟ್ಟೂರಿನ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಸಂಬಂಧಿಗಳು ಸಾಮಾನ್ಯಜನರು, ಶಾಲಾಮಕ್ಕಳು ಎಲ್ಲರೂ ಕೊನೆಯ ವಿದಾಯ ಹೇಳಲು ಆಗಮಿಸಿದ್ದಾರೆ.
ಕ್ರೈಸ್ತ ಧರ್ಮದ ವಿಧಿವಿಧಾನಗಳ ಪ್ರಕಾರ ಅಂತ್ಯವಿಧಿ ನಡೆಯುತ್ತಿದ್ದು ಕ್ರೈಸ್ತ ಧರ್ಮಗುರುಗಳು ಪೂಜೆ ಸಲ್ಲಿಸಲು ಆರಂಭಿಸಿದ್ದಾರೆ.