ಈಶಾನ್ಯ ರಾಜ್ಯಗಳಲ್ಲಿ ಕಳೆದ 9 ವರ್ಷಗಳಲ್ಲಿ ಅತಿ ಸುದೀರ್ಘ ಅವಧಿಯ ಭೂಕಂಪನ ಗುರುವಾರ ಮಧ್ಯರಾತ್ರಿ ಸಂಭವಿಸಿದೆ. 5.9ರಷ್ಟು ತೀವ್ರತೆಯಲ್ಲಿ 20 ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿತು. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಲಿಲ್ಲ. ಜನರು ಗಾಢ ನಿದ್ದೆಯಲ್ಲಿದ್ದ ವೇಳೆ ಕಂಪನ ಸಂಭವಿಸಿದ್ದು, ಭಯಭೀತರಾಗಿ ಜನರು ಹೊರಗೋಡಿ ಬಂದಿದ್ದಾರೆ. ಕಳೆದ ಮೂರು ವಾರಗಳ ಅವಧಿಯಲ್ಲಿ ಇದು ನಾಲ್ಕನೇ ಕಂಪನವಾಗಿದೆ.