ವರ್ಷದ ಹಿಂದೆ ರಾಷ್ಟ್ರದಲ್ಲಿ ಉಂಟು ಮಾಡಿದ್ದ ನೊಯ್ಡಾ ಅರುಷಿ ಕೊಲೆ ಪ್ರಕರಣಕ್ಕೆ ಈಗ ಹೊಸ ತಿರುವು ಲಭಿಸಿದ್ದು, ಕೊಲೆಯಾದ ಬಾಲಕಿ ಆರುಷಿಯ ಯೋನಿಯಿಂದ ಸಂಗ್ರಹಿಸಲಾಗಿದ್ದ ತೇವಾಂಶದ ಮಾದರಿಯು ಆರುಷಿಯದ್ದಲ್ಲ ಎಂಬುದಾಗಿ ಡಿಎನ್‌ಎ ಮತ್ತು ಕೈಬೆರಳಚ್ಚುಗಳ ಪರೀಕ್ಷೆ ಫಲಿತಾಂಶ ಹೇಳಿದೆ.
ಬದಲಿಗೆ ಪರೀಕ್ಷಾಲಯಕ್ಕೆ ಕಳುಹಿಸಲಾಗಿರುವ ಸಾಕ್ಷಿಗಳು ಅಪರಿಚಿತ ಮಹಿಳೆಯ ಯೋನಿಗೆ ಸೇರಿದ್ದು ಎಂದು ಸಿಬಿಐ ಮೂಲಗಳು ಬಹಿರಂಗಪಡಿಸಿವೆ. 2008ರ ಮೇ 15ರಂದು ನೋಯ್ಡಾದಲ್ಲಿ ಸಂಭವಿಸಿದ್ದ ದಂತವೈದ್ಯರ ಪುತ್ರಿ ಅರುಷಿ ಹಾಗೂ ಆಕೆಯ ಮನೆಗೆಲಸದಾಳು ಹೇಮರಾಜ್ ಕೊಲೆ ಪ್ರಕರಣವು ಅಂಸಂಖ್ಯ ತಿರುವು ಹಾಗೂ ಅನುಮಾನಗಳನ್ನು ತಳೆದಿದ್ದು, ಇದೀಗ ಬಹಿರಂಗವಾಗಿರುವ ವಿಚಾರವು ಅದಕ್ಕೆ ಹೊಸ ಸೇರ್ಪಡೆಯಾಗಿದೆ. ತಂದೆಯೇ ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಆಪಾದಿಸಲಾಗಿದ್ದು, ಅವರು ಸುಮಾರು 40ಕ್ಕೂ ಅಧಿಕ ದಿನಗಳ ಕಾಲ ಜೈಲಿನಲ್ಲಿ ಬಂಧಿಯಾಗಿದ್ದರು.
ಪರೀಕ್ಷಾಲಯಕ್ಕೆ ಕಳಹಿಸಲಾಗಿದ್ದ ಮಾದರಿಗಳನ್ನು ಪರೀಕ್ಷಿಸಿದಾಗ ಇವು ಆರುಷಿ ಯೋನಿಯದ್ದಲ್ಲ ಎಂಬುದನ್ನು ಪತ್ತೆಹಚ್ಚಲಾಗಿದೆ. ಮಾದರಿಯ ಸ್ಲೈಡ್‌ಗಳಲ್ಲಿ ವೀರ್ಯದ ಯಾವುದೇ ಕುರುಹುಗಳಿಲ್ಲ ಎಂದು ಪರೀಕ್ಷೆಗಳು ದೃಢಪಡಿಸಿವೆ ಎಂದು ಮೂಲಗಳು ತಿಳಿಸಿವೆ. ಈ ಮೊದಲು ಆರುಷಿ ಯೋನಿಯ ಬಳಿ ವೀರ್ಯ ಚೆಲ್ಲಿರುವ ಸಾಕ್ಷಿಗಳು ದೊರೆತಿವೆ ಎಂದು ಹೇಳಲಾಗಿತ್ತು.