ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ಬಿಜೆಪಿ ಹಿರಿಯ ಧುರೀಣರಾಗಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಶುಕ್ರವಾರ ಭೇಟಿ ಮಾಡಿ ಪ್ರಸಕ್ತ ರಾಜಕೀಯ ವಿದ್ಯಮಾನ ಕುರಿತು ಚರ್ಚಿಸಿದರು.
ಅನಾರೋಗ್ಯದಿಂದ ಬಳಲುತ್ತಿರುವ ವಾಜಪೇಯಿ ಅವರ ಆರೋಗ್ಯ ವಿಚಾರಿಸಿದ ಭಾಗವತ್, ದೇಶದ ರಾಜಕೀಯ ಪರಿಸ್ಥಿತಿಯ ಬಗ್ಗೆ ಸುಮಾರು ಅರ್ಧ ಗಂಟೆ ಕಾಲ ಚರ್ಚಿಸಿದರು ಎಂದು ವಾಜಪೇಯಿ ಅವರ ಕಾರ್ಯದರ್ಶಿ ಎನ್.ಸಿ. ಜಿಂಗ್ತಾ ತಿಳಿಸಿದ್ದಾರೆ.
PTI
ಇತ್ತೀಚೆಗಿ ಬಿಜೆಪಿ ಪಕ್ಷದೊಳಗೆ ಉಲ್ಬಣಿಸಿರುವ ಆಂತರಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ಭೇಟಿ ಅತ್ಯಂತ ಮಹತ್ವದ್ದಾಗಿದೆ. ಬಿಜೆಪಿಯು ತನ್ನ ಬಿಕ್ಕಟ್ಟನ್ನು ತಾನೇ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ಮಾಡಿದ್ದ ಆರ್ಎಸ್ಎಸ್, ಬಿಜೆಪಿ ನಾಯಕರಾದ ಎಲ್.ಕೆ. ಆಡ್ವಾಣಿ ಹಾಗೂ ರಾಜ್‌ನಾಥ್ ಸಿಂಗ್ ಅವರು ತಮ್ಮ ಪಾತ್ರಗಳ ಕುರಿತು ನಿರ್ಧರಿಸಲಿದ್ದಾರೆ ಎಂದು ಭಾಗ್ವತ್ ಇತ್ತೀಚೆಗೆ ಹೇಳಿದ್ದರು.