ಹಂದಿಜ್ವರದ ಕೇಂದ್ರಬಿಂದು ಎಂಬ ಕುಖ್ಯಾತಿಗೆ ಭಾಜನವಾಗಿರುವ ಪುಣೆಯಲ್ಲಿ ಮತ್ತೊಂದು ಸಾವು ಸಂಭವಿಸುವ ಮೂಲಕ ಇಲ್ಲಿ ಈ ಮಹಾಮಾರಿಗೆ ಬಲಿಯಾದವರ ಸಂಖ್ಯೆ 34ಕ್ಕೇರಿದೆ.
ಸಂದೀಪ್ ದಾಯ್ನೆ(35) ಎಂಬ ವ್ಯಕ್ತಿ ಕಳೆದ ರಾತ್ರಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಇವರು ಆಗಸ್ಟ್ 28ರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇದೇವೇಳೆ, ಇಲ್ಲಿ ಆರು ಹೊಸ ಪ್ರಕರಣಗಳು ಪತ್ತೆಯಾಗಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಶಂಕಿತ ಹಂದಿಜ್ವರ ಪ್ರಕರಣವನ್ನು ನಿಭಾಯಿಸಲು ವೈದ್ಯರಿಗೆ ತರಬೇತಿ ನೀಡಲು ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಾಗಾರಗಳನ್ನು ನಡೆಸುವುದಾಗಿ ಇಂಡಿಯನ್ ಮೆಡಿಕಲ್ ಸಂಘಟನೆ(ಐಎಂಎ)ಯ ಪುಣೆ ಘಟಕಗವು ಘೋಷಿಸಿದೆ.