ಶಿವಸೇನೆಯ ಮುಖವಾಣಿ ಪತ್ರಿಕೆಯಾದ 'ಸಾಮ್ನಾ'ದಲ್ಲಿ ಬಿಹಾರಿಗಳ ವಿರುದ್ಧ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ ಶಿವಸೇನಾ ಪಕ್ಷದ ವರಿಷ್ಠ ಬಾಳ್ ಠಾಕ್ರೆ ವಿರುದ್ಧ ಬಿಹಾರದ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಆದೇಶ ಹೊರಡಿಸಿದೆ.
ಜುಲೈ 7ರಂದು ನೀಡಿದ ಅರೆಸ್ಟ್ ವಾರಂಟ್ ಆದೇಶದನ್ವಯ ಠಾಕ್ರೆ ಕೋರ್ಟ್‌ಗೆ ಹಾಜರಾಗದೇ ಇರುವ ಕಾರಣ ಇದೀಗ ಸಬ್ ಡಿವಿಷನಲ್ ಜುಡಿಷಲ್ ಮ್ಯಾಜಿಸ್ಟ್ರೇಟ್ ರಾಕೇಶ್ ಪಾಟೀಲ್ ಅವರು ಠಾಕ್ರೆ ವಿರುದ್ಧ ಜಾಮೀನು ರಹಿತ ಬಂಧನಕ್ಕೆ ಆದೇಶಿಸಿದ್ದಾರೆ.
ಪಕ್ಷದ ಮುಖವಾಣಿಯಾದ ಸಾಮ್ನಾದಲ್ಲಿ ಬಿಹಾರಿಗಳ ವಿರುದ್ಧ ಪ್ರಚೋದನಾಕಾರಿ ಹೇಳಿಕೆಯನ್ನು ನೀಡಿರುವ ಠಾಕ್ರೆ ಅವರ ವಿರುದ್ಧ 2008ರಲ್ಲಿ ಹಿರಿಯ ನ್ಯಾಯವಾದಿ ರಾಜೇಶ್ ಕುಮಾರ್ ದೂರು ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ನ್ಯಾಯಾಲಯ ಬಾಳ್ ಠಾಕ್ರೆ ವಿರುದ್ಧ ಜಾಮೀನು ರಹಿತ ವಾರಂಟ್ ಆದೇಶ ನೀಡಿದೆ.