ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಒಂದೇ ಮನೆಯಲ್ಲಿ ಜಯಲಲಿತಾ, ಠಾಕ್ರೆ, ಮುಲಾಯಂ, ರಾಜನಾಥ್..! (Jayalalithaa | Bal Thackeray | Mulayam Singh | Rajnath Singh)
 
ಇಲ್ಲಿ ಬಾಳ್ ಠಾಕ್ರೆ ರಚ್ಚೆ ಹಿಡಿಯಲಾರಂಭಿಸಿದಾಗ ಜಯಲಲಿತಾ ತೊಡೆ ಮೇಲಿಟ್ಟುಕೊಂಡು ಲಾಲಿ ಹಾಡುತ್ತಾರೆ, ಮುಲಾಯಂ ಸಿಂಗ್ ಯಾದವ್‌ ಹೆಗಲ ಮೇಲೆ ಮನಮೋಹನ್ ಸಿಂಗ್ ಸವಾರಿ ಮಾಡುತ್ತಾರೆ, ಕಲ್ಯಾಣ್ ಸಿಂಗ್ ಮತ್ತು ರಾಜನಾಥ್ ಸಿಂಗ್ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಕಾಣುತ್ತಿಲ್ಲ ಮತ್ತು ಗ್ಯಾನಿ ಜೈಲ್ ಸಿಂಗ್ ಜತೆ ಕ್ರಿಕೆಟ್ ಕೂಡ ಆಡುತ್ತಾರೆ. ಶೀಘ್ರದಲ್ಲೇ ಈ ಮನೆಗೆ ಮಾಯಾವತಿ ಕೂಡ ಬರುವ ನಿರೀಕ್ಷೆಗಳಿವೆ..!

ಇದು ಗೊಂದಲ ತರುವ ವಿಚಾರವಾಗಿದ್ದರೂ ಸತ್ಯ. ಈ ಏಳು ಜನ ರಾಜಕಾರಣಿಗಳ ಹೆಸರನ್ನು ತಮ್ಮ ಮಕ್ಕಳಿಗೆ ದಂಪತಿಯೊಂದು ಇಟ್ಟಿದೆಯೆನ್ನುವುದು ಒಳಹೂರಣ.

ಉತ್ತರ ಪ್ರದೇಶದ ದಿನಗೂಲಿ ಕಾರ್ಮಿಕರಾದ ಮಿಥಾಯ್ ಲಾಲ್ (45) ಮತ್ತು ಅವರ ಪತ್ನಿ ಚಂದ್ರಸೇನಾ (42) ದಂಪತಿಗಳಿಗೆ ಏಳು ಮಕ್ಕಳು. ಅವರಿಗೆ ಪ್ರಮುಖ ರಾಜಕೀಯ ನಾಯಕರ ಹೆಸರಿಡುವುದರಿಂದ ಮುಂದೆ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎಂಬ ನಿರೀಕ್ಷೆಯಿಂದ ಹೀಗೆ ಮಾಡಿದ್ದಾರಂತೆ.

ಇನ್ನೇನು ಈ ವರ್ಷಾಂತ್ಯದೊಳಗೆ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿರುವ ದಂಪತಿಗೆ, ಅದು ಹೆಮ್ಣು ಮಗುವಾಗಿರಬಹುದು ಎಂದು ಊಹಿಸಿದ್ದಾರೆ. ಹಾಗದಲ್ಲಿ ಆ ಮಗುವಿನ ಹೆಸರು ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿಯವರದ್ದಾಗಿರುತ್ತದೆಯಂತೆ..!

ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಜಲಾಲ್‌ಪುರ ನಗರದಲ್ಲಿ ಈ ಕುಟುಂಬ ವಾಸಿಸುತ್ತಿದೆ. ಲಕ್ನೋದಿಂದ ಸುಮಾರು 180 ಕಿಲೋ ಮೀಟರ್ ದೂರದಲ್ಲಿದೆ ಈ ನಗರ.

ಹೀಗೆ ನಾಮಕರಣ ಮಾಡುವುದರಿಂದ ಯಾರಾದರೊಬ್ಬರ ಭವಿಷ್ಯ ಉತ್ತಮವಾಗುವುದೆಂಬ ನಂಬಿಕೆ ನನ್ನದು. ಅದಕ್ಕಾಗಿ ನನ್ನ ಆರು ಗಂಡು ಹಾಗೂ ಒಬ್ಬ ಹೆಣ್ಣು ಮಗಳಿಗೆ ದೇಶದ ಜನಪ್ರಿಯ ರಾಜಕಾರಣಿಗಳ ಹೆಸರನ್ನಿಟ್ಟಿದ್ದೇನೆ ಎಂದು ಮಕ್ಕಳ ತಂದೆ ಮಿಥಾಯ್ ಲಾಲ್ ತಿಳಿಸಿದ್ದಾರೆ.

ಈ ಕುಟುಂಬದಲ್ಲಿನ ದೊಡ್ಡ ಮಗ ಮುಲಾಯಂ ಸಿಂಗ್ ಯಾದವ್. ಆತನಿಗೆ 18 ವರ್ಷ. ಅತೀ ಚಿಕ್ಕವನು ಬಾಳ್ ಠಾಕ್ರೆ, ಆತನಿಗೆ ಕೇವಲ ಐದು ತಿಂಗಳು ಪ್ರಾಯ. ಕಲ್ಯಾಣ್ ಸಿಂಗ್‌ಗೆ 16, ಗ್ಯಾನಿ ಜೈಲ್ ಸಿಂಗ್‌ಗೆ 15, ರಾಜನಾಥ್ ಸಿಂಗ್‌ಗೆ 13, ಮನಮೋಹನ್ ಸಿಂಗ್‌ಗೆ ಐದು ವರ್ಷ. ಒಬ್ಬಳೇ ಮಗಳು ಜಯಲಲಿತಾಳಿಗೆ ಎಂಟು ವರ್ಷ.

ಇನ್ನು ಕೆಲವೇ ತಿಂಗಳಲ್ಲಿ ಜನ್ಮತಾಳಲಿರುವ ಎಂಟನೇ ಮಗು ಹೆಣ್ಣಾಗಿರಬಹುದೆಂಬ ನಿರೀಕ್ಷೆಯಲ್ಲಿರುವ ದಂಪತಿ ಮಗುವಿಗೆ ಈಗಾಗಲೇ ಹೆಸರನ್ನು ಅಂತಿಮಗೊಳಿಸಿದ್ದಾರೆ.

ನಾವು ಕೂಡ ದಲಿತ ಸಮಾಜದವರು. ಬೆಹೆನ್‌ಜೀಯವರು ದೇಶದ ಪ್ರಭಾವಿ ರಾಜಕಾರಣಿಗಳಲ್ಲೊಬ್ಬರಾಗಿರುವುದರಿಂದ ಮುಂದಿನ ಮಗುವಿನ ಹೆಸರು ಅವರದ್ದೇ ಆಗಿರುತ್ತದೆ. ಆಕೆ ಮಾಯಾವತಿಯಂತೆ ಹೆಮ್ಮೆಯ ಮಗಳಾಗಬೇಕೆಂಬುದು ನಮ್ಮ ಬಯಕೆ ಎನ್ನುತ್ತಾರೆ ದಂಪತಿ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ