ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವೈಎಸ್ಆರ್ ಮರಣೋತ್ತರ ಪರೀಕ್ಷೆ ವರದಿ ತನಿಖಾ ಸಂಸ್ಥೆಗೆ ಹಸ್ತಾಂತರ (YSR | Autopsy report | probe agencies | Andra Pradesh)
ವೈಎಸ್ಆರ್ ಮರಣೋತ್ತರ ಪರೀಕ್ಷೆ ವರದಿ ತನಿಖಾ ಸಂಸ್ಥೆಗೆ ಹಸ್ತಾಂತರ
ಹೈದರಾಬಾದ್, ಸೋಮವಾರ, 7 ಸೆಪ್ಟೆಂಬರ್ 2009( 13:20 IST )
PTI
ಇತ್ತೀಚೆಗಿನ ಹೆಲಿಕಾಫ್ಟರ್ ಅಪಘಾತದಲ್ಲಿ ಸಾವನ್ನಪ್ಪಿರುವ ಆಂಧ್ರಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಹಾಗೂ ಇತರ ನಾಲ್ವರ ಮರಣೋತ್ತರ ಪರೀಕ್ಷೆಯ ವರದಿಗಳನ್ನು, ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿ(ಸಿಐಡಿ) ಹಾಗೂ ನಾಗರಿಕ ವಾಯುಯಾನ ನಿರ್ದೇಶನಾಲಯಕ್ಕೆ ಹಸ್ತಾಂತರಿಸಲಾಗಿದೆ.
ಶವಪರೀಕ್ಷೆ ನಡೆಸಿರುವ ಫಾರೆನ್ಸಿಕ್ ತಂಡವು ಈ ವರದಿಯನ್ನು ಮೊಹರುಮಾಡಿದ ಲಕೋಟೆಯಲ್ಲಿರಿಸಿ ಕರ್ನೂಲ್ ಜಿಲ್ಲಾ ಪೊಲೀಸರಿಗೆ ಭಾನುವಾರ ಹಸ್ತಾಂತರಿಸಿತ್ತು.
ವರದಿಯನ್ನು ಸ್ವೀಕರಿಸಿದ್ದು ಇದನ್ನು ತನಿಖಾ ಸಂಸ್ಥೆಗಳಿಗೆ ನೀಡುವುದಾಗಿ ಕರ್ನೂಲ್ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದು, ವರದಿಯನ್ನು ಮೊಹರು ಮಾಡಿದ ಕವರ್‌ನಲ್ಲಿ ಇರಿಸಿದ್ದ ಕಾರಣ ವರದಿಯಲ್ಲೇನಿದೆ ಎಂಬುದು ತಿಳಿದಿಲ್ಲ ಎಂದು ಹೇಳಿದ್ದಾರೆ.
ಹೆಲಿಕಾಫ್ಟರ್ ಅಪಘಾತಕ್ಕೀಡಾಗಿ ಗುರುತು ಸಿಗದಂತೆ ಸುಟ್ಟುಕರಕಲಾಗಿದ್ದ ಮೃತದೇಹಗಳ ಪರೀಕ್ಷೆಯನ್ನು ನಲ್ಲಮಲ ಕಾಡಿನಿಂದ ಶವಗಳನ್ನು ಹೊರತಂದ ತಕ್ಷಣವೇ ರವಾನಿಸಲಾಗಿತ್ತು. ಆಂಧ್ರಮುಖ್ಯಮಂತ್ರಿ ರಾಜಶೇಖರ ರೆಡ್ಡಿ, ಅವರ ಪ್ರಮುಖ ಕಾರ್ಯದರ್ಶಿ ಪಿ. ಸುಬ್ರಮಣಿಯಂ, ಮುಖ್ಯ ಭದ್ರತಾ ಅಧಿಕಾರಿ ಎ.ಎಸ್.ಸಿ ವೆಸ್ಲಿ, ಪೈಲಟ್‌ಗಳಾದ ಎಸ್.ಕೆ. ಭಾಟಿಯಾ ಹಾಗೂ ಎಂ.ಎಸ್. ರೆಡ್ಡಿ ಅವರುಗಳು ಅಪಘಾತದಲ್ಲಿ ಸಾವನ್ನಪ್ಪಿದ್ದರು.
ಕರ್ನೂಲ್ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಪ್ರಸಾದ್ ನೇತೃತ್ವದ ವೈದ್ಯರ ತಂಡ ಮರಣೋತ್ತರ ಪರೀಕ್ಷೆ ನಡೆಸಿತ್ತು.