ಆಂಧ್ರಮುಖ್ಯ ಮಂತ್ರಿ ರಾಜಶೇಖರ ರೆಡ್ಡಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್ ಪತನ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಆಂಧ್ರಪ್ರದೇಶ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಕೇಂದ್ರ ಗೃಹಸಚಿವ ಪಿ.ಚಿದಂಬರಂ ಅವರು ಒಪ್ಪಿದ್ದಾರೆ ಎಂಬುದಾಗಿ ಉಸ್ತುವಾರಿ ಮುಖ್ಯಮಂತ್ರಿ ರೋಸಯ್ಯ ತಿಳಿಸಿದ್ದಾರೆ ಎಂಬುದಾಗಿ ಆಂಧ್ರಪ್ರದೇಶ ಗೃಹಸಚಿವೆ ಪಿ. ಸಬಿತಾ ಇಂದ್ರ ರೆಡ್ಡಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
"ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಕೇಂದ್ರ ಗೃಹಸಚಿವಾಲಯ ಒಪ್ಪಿದೆ ಮತ್ತು ಈ ಸಂದೇಶವನ್ನು ಮುಖ್ಯಮಂತ್ರಿಗಳಿಗೆ ತಿಳಿಸಲಾಗಿದೆ ಎಂಬುದಾಗಿ ಸಬಿತಾ ರೆಡ್ಡಿ ಅವರು ಹೇಳಿದ್ದಾರೆ. ಇದೇ ವೇಳೆ ರಾಜ್ಯದ ಅಪರಾಧಿ ತನಿಖಾ ಇಲಾಖೆ ನಡೆಸುವ ತನಿಖೆಯು ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.