ಅಣ್ವಸ್ತ್ರಗಳನ್ನು ಹೊತ್ತೊಯ್ಯಬಲ್ಲ ಸಮೀಪಗಾಮಿ ಕ್ಷಿಪಣಿ ಪೃಥ್ವಿ-2ನ್ನು ಸೋಮವಾರ ಯಶಸ್ವಿಯಾಗಿ ಉಡಾಯಿಸಲಾಗಿದೆ. ಒರಿಸ್ಸಾದ ಚಂಡೀಪುರದಿಂದ ಈ ಕ್ಷಿಪಣಿಯನ್ನು ಮುಂಜಾನೆ ಉಡಾಯಿಸಲಾಗಿದೆ. 350 ಕಿಲೋ ಮೀಟರ್ ದೂರ ಚಿಮ್ಮುವ ಈ ಕ್ಷಿಪಣಿ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
ಒಂಬತ್ತು ಮೀಟರ್ ಉದ್ದ ಹಾಗೂ ಒಂದು ಮೀಟರ್ ಅಗಲದ ಈ ಖಂಡಾಂತರ ಕ್ಷಿಪಣಿಯನ್ನು ಚಂಡೀಪುರದ ಸಮಗ್ರ ಪರೀಕ್ಷಾ ವಲಯದಿಂದ ಉಡಾಯಿಸಲಾಯಿತು.
ಈ ಪರೀಕ್ಷೆಯು ಬಳಕೆದಾರರ ಅಭ್ಯಾಸದ ಅಂಗವಾಗಿದ್ದು, ಭಾರತೀಯ ಸೇನೆಯು ರೂಪಿಸಿದ ವಿಶೇಷ ತುಕಡಿಯು ಇದನ್ನು ನಡೆಸಿರುವುದಾಗಿ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ದಿ ಸಂಸ್ಥೆ(ಡಿಆರ್ಡಿಒ) ಹೇಳಿದೆ.