ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗರಿಗೆದರಿದ 'ನೋ ಲೆಟ್ರಿನ್, ನೋ ಬ್ರೈಡ್' ಮಂತ್ರ (India | latrines | Haryana | Power)
Feedback Print Bookmark and Share
 
ಸುಮಾರು 2 ವರ್ಷಗಳ ಕೆಳಗೆ ಗ್ರಾಮೀಣ ಭಾರತದಲ್ಲಿ ಆರಂಭವಾದ 'ಶೌಚಾಲವಿಲ್ಲವೇ, ವಧುವೂ ಇಲ್ಲ' ವೆಂಬ 'ನೋ ಟಾಯ್ಲೆಟ್, ನೋ ಬ್ರೈಡ್' ಆಂದೋಳನ ಗರಿಗೆದರಿದ್ದು, ದಾಂಪತ್ಯಜೀವನಕ್ಕೆ ಕಾಲಿಡುವ ಅನೇಕ ಮಂದಿ ಯುವತಿಯರು ಟಾಯ್ಲೆಟ್ ಇಲ್ಲದ ಮನೆಯ ಯುವಕನ ಜತೆ ವಿವಾಹಕ್ಕೆ ಒಲ್ಲೆ ಎನ್ನುತ್ತಿದ್ದಾರೆ.

ಈ ಕಾರ್ಯಕ್ರಮವನ್ನು ಕ್ರಾಂತಿಕಾರಿಯೆಂದು ಮಹಿಳಾ ಹಕ್ಕು ಕಾರ್ಯಕರ್ತರು ತಿಳಿಸಿದ್ದು, ಭಾರತದ ವಿಶಾಲವಾದ ಬಡತನವನ್ನೇ ಹೊದ್ದಿರುವ ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸಿದೆ. ಭಾರತದಲ್ಲಿ ಸುಮಾರು ಅರ್ಧದಷ್ಟು ಜನಸಂಖ್ಯೆ ಅಂದರೆ ಸುಮಾರು 66.5 ಕೋಟಿ ಜನರು ಶೌಚಾಲಯ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ನೋ, ಬ್ರೈಡ್, ನೋ ಟಾಯ್ಲೆಟ್ ಆಂದೋಳನ ಷುರುವಾದ ಮೇಲೆ ಹರ್ಯಾಣದಲ್ಲಿ ಸರ್ಕಾರಿ ಹಣದಿಂದ ಸುಮಾರು 1.4 ದಶಲಕ್ಷ ಟಾಯ್ಲೆಟ್ ನಿರ್ಮಿಸಲಾಗಿದೆಯೆಂದು ರಾಜ್ಯದ ಆರೋಗ್ಯ ಇಲಾಖೆ ತಿಳಿಸಿದೆ. ಪಂಚಗುಜ್ರಾನ್‌ನಲ್ಲಿ ಏಳುಮಕ್ಕಳನ್ನು ಸಾಕುತ್ತಿರುವ ಇಂದ್ರಾ ಭಾಟಿಯ, ತಮ್ಮ ಮನೆಯಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಿಸಿದ ಬಳಿಕ ಜೀವನದ ದಿಕ್ಕೇ ಬದಲಾಯಿತೆಂದು ಹೇಳಿದ್ದು, ತಮ್ಮ ಪುತ್ರಿಯರು ದಾಂಪತ್ಯಕ್ಕೆ ಕಾಲಿಡುವಾಗ ಅವರ ಮನೆಗಳು ಶೌಚಾಲಯದಿಂದ ಪೂರ್ಣ ಸಜ್ಜಿತವಾಗುವಂತೆ ಖಾತರಿ ಮಾಡುವುದಾಗಿ ಹೇಳಿದರು.

ಲೆಟ್ರಿನ್ ಇಲ್ಲದ ಮನೆಯ ಹುಡುಗನ ಬಳಿ ತಮ್ಮ ಪುತ್ರಿಯನ್ನು ಸುಳಿಯಲೂ ಬಿಡುವುದಿಲ್ಲವೆಂದು ಉಷಾ ಪಗ್ಡಿ ಹೇಳಿದ್ದಾರೆ. ಪುತ್ರಿ ವಿಮ್ಲಾಸ್ ಸಾಸ್ವ ಪ್ರೌಢಶಾಲೆ ವಿದ್ಯಾಭ್ಯಾಸ ಮುಗಿಸಿದ್ದು, ಟೆಕ್ನಿಕಲ್ ಶಾಲೆಯಲ್ಲಿ ಎಲೆಕ್ಟ್ರಾನಿಕ್ಸ್ ಕೋರ್ಸ್ ತೆಗೆದುಕೊಂಡಿದ್ದಾಳೆ. ತಾನು ಮನೆಯನ್ನು ಪ್ರತಿಬಾರಿ ತೊಳೆಯುವಾಗ ತನಗೆ ಏನೂ ಗೊತ್ತಿಲ್ಲವೆಂಬ ಕೀಳರಿಮೆಯಿಂದ ಬಳಲುತ್ತಿದ್ದೆ. ಈಗ ಯುವತಿಯರು ವಿದ್ಯಾಭ್ಯಾಸದಿಂದ ಪ್ರಭಾವಶಾಲಿಗಳಾಗಿದ್ದು, ಪುರುಷರು ನಿರಾಕರಿಸುವಂತಿಲ್ಲ' ಎಂದು ಅವರು ಹೇಳಿದ್ದಾರೆ.

ವಧುವಿನ ಕುಟುಂಬ ತನ್ನ ಜೀವಮಾನದ ಸಂಪಾದನೆಯನ್ನು ವರದಕ್ಷಿಣೆಗೆ ತೆರಬೇಕಾಗುತ್ತಿದ್ದರಿಂದ ಯುವತಿಯರು ಆರ್ಥಿಕ ಹೊರೆಯೆಂದು ಸಾಂಪ್ರದಾಯಿಕ ಭಾವನೆ ನೆಟ್ಟಿತ್ತು. ಆದರೆ ಇತ್ತೀಚೆಗೆ ಯುವತಿಯರು ಆರ್ಥಿಕವಾಗಿ ಸ್ವಾವಲಂಬಿಯಾಗಲು ವಿದ್ಯಾಭ್ಯಾಸದ ಮೊರೆಹೋಗಿದ್ದು, ವರದಕ್ಷಿಣೆ ಮನೋಭಾವನೆ ಕ್ರಮೇಣ ಬದಲಾಗುತ್ತಿದೆ. '
ಸಂಬಂಧಿತ ಮಾಹಿತಿ ಹುಡುಕಿ