ಮದರ್ ಥೆರೇಸಾ ಅವರ ಪಾರ್ಥಿವ ಶರೀರವನ್ನು ಆಲ್ಬೇನಿಯಕ್ಕೆ ಕಳಿಸಬೇಕೆಂದು ಯಾವುದೇ ಭಾಗದಿಂದ ತಮಗೆ ಮನವಿ ಬಂದಿಲ್ಲವೆಂದು ಕೋಲ್ಕತಾದ ಚಾರಿಟಿ ಆಫ್ ಮಿಷನರೀಸ್ ತಿಳಿಸಿದೆ. ಯಾವುದೇ ನಿರ್ದಿಷ್ಟ ಮನವಿ ಬರದೇ ನಾವು ಪ್ರತಿಕ್ರಿಯಿಸುವುದಿಲ್ಲವೆಂದು ಸಲೇಸಿಯನ್ ಪಾದ್ರಿ ಫಾದರ್ ರಾಬಿನ್ ಗೋಮ್ಸ್ ತಿಳಿಸಿದ್ದಾರೆ.
ಮದರ್ ಹೌಸ್ ನೆಲಮಹಡಿಯಲ್ಲಿರುವ ಕೊಠಡಿಯಲ್ಲಿ ಮದರ್ ಥೆರೇಸಾ ಶರೀರವನ್ನು ಸಮಾಧಿಯಿಂದ ಹೊರಕ್ಕೆ ತೆಗೆಯುವುದಕ್ಕೆ ಬಹುಶಃ ಮದರ್ ಜಾಗತಿಕ ವ್ಯವಸ್ಥೆಯ ಮುಖ್ಯಕೇಂದ್ರ ಎಂಒಸಿ ಒಪ್ಪುವುದಿಲ್ಲವೆಂದು ಅವರು ತಿಳಿಸಿದ್ದಾರೆ.ಮದರ್ ಥೆರೇಸಾ ಶರೀರವನ್ನು ಅಲ್ಬೇನಿಯಕ್ಕೆ ತರಿಸುವ ಪ್ರಯತ್ನವನ್ನು ತೀವ್ರಗೊಳಿಸುವುದಾಗಿ ವರದಿಗಳು ಕೇಳಿಬಂದ ಬಳಿಕ ಈ ಪ್ರತಿಕ್ರಿಯೆ ಹೊರಬಿದ್ದಿದೆ.
ಆಲ್ಬೇನಿಯ ರೋಮನ್ ಕ್ಯಾಥೋಲಿಕ್ ಸನ್ಯಾಸಿನಿ ಮದರ್ ಥೆರೇಸಾ ಅವರ ಪಾರ್ಥಿವ ಶರೀರವನ್ನು ಸ್ವದೇಶಕ್ಕೆ ವಾಪಸು ಕಳಿಸಬೇಕೆಂದು ಆಲ್ಬೇನಿಯ ಪ್ರಧಾನಮಂತ್ರಿ ಸಾಲಿ ಬೆರಿಷಾ ಸರ್ಕಾರ ಶುಕ್ರವಾರ ತಿಳಿಸಿದೆ.
ಮದರ್ ಥೆರೇಸಾ ಕೇಂದ್ರವು ಎಲ್ಲ ರಾಷ್ಟ್ರಗಳಿಗೆ ಸೇರಿದ ಪಾದ್ರಿಗಳು ಮತ್ತು ಸನ್ಯಾಸಿನಿಗಳನ್ನು ಒಳಗೊಂಡಿದ್ದು, ಥೆರೇಸಾ ಆಲ್ಪೇನಿಯನ್ ಆಗಿದ್ದರೂ ಅದರ ಮನವಿ ಸ್ವೀಕಾರಾರ್ಹವಲ್ಲವೆಂದು ತಿಳಿಸಿದೆ.ಮದರ್ ಭಾರತೀಯ ಪೌರತ್ವ ಸ್ವೀಕರಿಸಿದ್ದರಿಂದ ಅವರ ದೇಹವನ್ನು ದೇಶದ ಹೊರಗೆ ವರ್ಗಾಯಿಸಲು ಕೇಂದ್ರ ಸರ್ಕಾರ ಅವಕಾಶ ನೀಡಬಾರದೆಂದು ತಿಳಿಸಿದ್ದಾರೆ.