ಸ್ವಿಸ್ ಬ್ಯಾಂಕ್‌ಗಳಲ್ಲಿ ಕೊಳೆಯುತ್ತಿರುವ ಭಾರತೀಯರ ಠೇವಣಿಯ ಪಟ್ಟಿಯನ್ನು ನೀಡಬೇಕೆಂಬ ಭಾರತೀಯರ ಒತ್ತಾಯಕ್ಕೆ ಮಣಿದಿರುವ ಸ್ವಿಜರ್‌ಲ್ಯಾಂಡ್, ಇದಕ್ಕೆ ಪೂರಕವಾಗಿ ತನ್ನ ಕಾನೂನಿಗೆ ತಿದ್ದುಪಡಿ ಮಾಡುವುದಾಗಿ ಹೇಳಿದೆ. ಒಂದೊಮ್ಮೆ ಸ್ವಿಜರ್‌ಲ್ಯಾಂಡ್ ಈ ಕ್ರಮಕ್ಕೆ ಮುಂದಾದರೆ, ಸ್ವಿಸ್ ಬ್ಯಾಂಕ್‌ಗಳಲ್ಲಿರುವ ಅಪಾರ ಮೊತ್ತದ ಕಪ್ಪುಹಣದ ವಿವರಣೆ ಲಭಿಸಲಿದೆ.
ಸ್ವಿಸ್ ಕಾನೂನಿನ ದುರ್ಬಳಕೆಯಾಗದಂತೆ ತಡೆಯಲು ದುಪ್ಪಟ್ಟು ತೆರಿಗೆ ಪದ್ಧತಿ ಒಪ್ಪಂದಕ್ಕೆ ತಿದ್ದುಪಡಿ ತರಲಾಗಿದೆ ಎಂಬುದಾಗಿ ಭಾರತದಲ್ಲಿ ಸ್ವಿಜರ್‌ಲ್ಯಾಂಡಿನಲ್ಲಿ ರಾಯಭಾರಿಯಾಗಿರುವ ಫಿಲಿಪ್ ವೆಲ್ಟಿ ಬುಧವಾರ ತಿಳಿಸಿದ್ದಾರೆ. ಆದರೆ ತಿದ್ದುಪಡಿ ಯಾವಾಗ ಆಗಲಿದೆ ಎಂಬುದನ್ನು ಫಿಲಿಪ್ ಅವರು ನಿಖರವಾಗಿ ಹೇಳದೇ ಇದ್ದರೂ ಇದು ಉಭಯ ಸರ್ಕಾರಗಳ ಮಾತುಕತೆಗಳನ್ನು ಅವಲಂಭಿಸಿದೆ ಎಂದು ಹೇಳಿದ್ದಾರೆ.
ಆದಾಯ ತೆರಿಗೆಯಿಂದ ನುಣುಚಿಕೊಳ್ಳುವ ಸಲುವಾಗಿ ಹಣಉಳ್ಳವರು ಸ್ವಿಸ್ ಬ್ಯಾಂಕ್‌ಗಳಲ್ಲಿ ಹಣ ಹೂಡುತ್ತಾರೆ. ಈ ಮಾಹಿತಿಗಳನ್ನು ಬಹಳ ಗೌಪ್ಯವಾಗಿ ಇರಿಸಲಾಗುತ್ತದೆ. ಈ ಖಾತೆಗಳ ವಿವರವನ್ನು ಬ್ಯಾಂಕ್ ಸಿಬ್ಬಂದಿಗಳೂ ನೋಡದಂತಹ ಕಠಿಣ ಕಾನೂನುಗಳಿವೆ. ಇದರಿಂದಾಗಿ ಭಾರತೀಯರ ಖಾತೆಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಭಾರತಕ್ಕೆ ಲಭ್ಯವಿಲ್ಲ.