ಗೋವಾದಲ್ಲಿ ನಿಗೂಢ ಸಾವುಗಳು: ಪೊಲೀಸರು ಚಕಿತ
ವೆರ್ನಾ, ಪಣಜಿ, ಗುರುವಾರ, 15 ಅಕ್ಟೋಬರ್ 2009( 18:42 IST )
ಕರಾವಳಿ ವಿಹಾರಧಾಮ ಗೋವಾದ ವಿವಿಧ ಸ್ಥಳಗಳಲ್ಲಿ ಮಹಿಳೆಯರ ನಿಗೂಢ ಸಾವುಗಳ ಬಗ್ಗೆ ಪೊಲೀಸರನ್ನು ಚಕಿತಗೊಳಿಸಿದೆ. ಕಳೆದ ಮೂರು ದಿನಗಳಲ್ಲಿ 6 ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ 10 ಜನರು ನಿಗೂಢ ರೀತಿಯಲ್ಲಿ ಮೃತರಾಗಿರುವುದು ಪೊಲೀಸರನ್ನು ದಿಗ್ಮೂಢರನ್ನಾಗಿಸಿದೆ. ವೆರ್ನಾದ ಏಕಾಂತ ಸ್ಥಳವೊಂದರಲ್ಲಿ 16ರ ಪ್ರಾಯದ ಬಾಲಕಿಯ ಸುಟ್ಟ ದೇಹವನ್ನು ಪೊಲೀಸರು ಗುರುತಿಸಿದ್ದರು.
ಭಾನುವಾರದಿಂದ ಬಾಲಕಿ ನಾಪತ್ತೆಯಾಗಿದ್ದಾಳೆಂದು ವರದಿಯಾಗಿತ್ತು. ಪಣಜಿಯಲ್ಲಿ ಮರುದಿನವೇ ದಂಪತಿಯ ಶವಗಳು ಪತ್ತೆಯಾಗಿದ್ದು, ಅವರಿಬ್ಬರು ನೀರಿನಲ್ಲಿ ಮುಳುಗಿ ಸತ್ತಿದ್ದರು.ಮೃತದೇಹಗಳಲ್ಲಿರುವ ಸಮಾನ ಅಂಶವೇನೆಂದರೆ ಎಲ್ಲ ದೇಹಗಳನ್ನು ಸುಟ್ಟಿರುವುದೆಂದು ಪೊಲೀಸ್ ಸೂಪರಿಂಟೆಂಡೆಂಟ್ ದೇಶಪಾಂಡೆ ತಿಳಿಸಿದ್ದಾರೆ.
ಮೃತದೇಹಗಳಲ್ಲಿ ಇಬ್ಬರ ಗುರುತು ಪತ್ತೆಹಚ್ಚಲಾಗಿದ್ದು, ಒಬ್ಬರಿಗೊಬ್ಬರು ಸಂಬಂಧವಿಲ್ಲದವರು ಮತ್ತು ಇನ್ನುಳಿದ ಎರಡು ದೇಹಗಳನ್ನು ಗುರುತಿಸಬೇಕಾಗಿದೆ. ಇವೆರೆಲ್ಲರ ದೇಹಗಳ ಸಮಾನ ಅಂಶವೇನೆಂದರೆ ಮೂರು ಪ್ರಕರಣಗಳಲ್ಲಿ ದೇಹಗಳಿಗೆ ಬೆಂಕಿ ಹಚ್ಚಿನಾಶಕ್ಕೆ ಯತ್ನಿಸಲಾಗಿದೆ. ಈ ಎಲ್ಲ ಪ್ರಕರಣಗಳ ಶವಪರೀಕ್ಷೆ ವರದಿಗಳನ್ನು ನಿರೀಕ್ಷಿಸಲಾಗುತ್ತಿದೆ.
ನಾವು ಸರಣಿ ಕೊಲೆಗಳ ಬಗ್ಗೆ ಶಂಕಿಸಿದ್ದರೂ, ಇವುಗಳನ್ನು ಸರಣಿ ಹತ್ಯೆಯೆಂದು ವರದಿ ಮಾಡುವುದು ಸೂಕ್ತವಾಗಿ ಕಾಣುವುದಿಲ್ಲವೆಂದು ದೇಶಪಾಂಡೆ ಹೇಳಿದ್ದಾರೆ. ಬ್ರಿಟನ್ ಯುವತಿ ಸ್ಕಾರ್ಲೆಟ್ ಕೀಲಿಂಗ್ ಮತ್ತು ರಷ್ಯಾದ ಯುವತಿ ಎಲೆನಾ ಸುಖೋನೋವಾ ಹತ್ಯೆಗಳ ಬಳಿಕ ಗೋವಾದಲ್ಲಿ ಮಹಿಳೆಯರ ವಿರುದ್ಧ ಅಪರಾಧಗಳು ಗಮನಸೆಳೆದಿವೆ.