ಇತ್ತೀಚೆಗೆ ಬಿಡುಗಡೆಗೊಂಡ ತಮ್ಮ ಪುಸ್ತಕದಲ್ಲಿ ಜಿನ್ನಾರನ್ನು ಹೊಗಳಿ ಪಕ್ಷದ ಕೆಂಗಣ್ಣೀಗೀಡಾಗಿ ಬಿಜೆಪಿಯಿಂದ ಉಚ್ಚಾಟನೆಗೀಡಾಗಿರುವ ಹಿರಿಯ ರಾಜಕಾರಣಿ ಜಸ್ವಂತ್ ಸಿಂಗ್ ಅವರಿಗಿನ್ನು ಲೋಕಸಭೆಯಲ್ಲಿ ಮುಂದಿನ ಬೆಂಚಿಲ್ಲ. ಪಕ್ಷದಿಂದ ಹೊರಬಿದ್ದಿರುವ ಅವರು ಲೋಕಸಭೆಯ ಮೊದಲ ಸೀಟಿನಿಂದಲೂ ಹೊರಬಿದ್ದಿದ್ದಾರೆ.
ಮೊದಲ ಸಾಲಿನಲ್ಲಿ ಆಡ್ವಾಣಿ, ಸುಷ್ಮಾ ಸ್ವರಾಜ್, ರಾಜ್ನಾಥ್ ಸಿಂಗ್ ಮುಂತಾದ ಪ್ರಮುಖ ನಾಯಕರೊಂದಿಗೆ ಕುಳಿತುಕೊಳ್ಳುವ ಅವಕಾಶ ಪಡೆದಿದ್ದ ಜಸ್ವಂತ್ ಇದೀಗ ಈ ಅವಕಾಶದಿಂದ ವಂಚಿತರಾಗಿದ್ದಾರೆ.
ಬಿಜೆಪಿಯಿಂದ ಉಚ್ಚಾಟಿತರಾಗಿರುವ ಅವರಿಗೆ ಮೂರನೆಯ ಅಥವಾ ಐದನೆಯ ಸಾಲಿನಲ್ಲಿ ಅವಕಾಶ ನೀಡಲಾಗುವುದು ಎಂದು ಮೂಲಗಳು ಹೇಳಿವೆ.