2011ರ ಸೆನ್ಸಸ್‌ನಲ್ಲಿ ಬೆರಳಚ್ಚು, ಕಣ್ಣಿನ ಸ್ಕ್ಯಾನ್: ನಿಲೇಕಣಿ
ನವದೆಹಲಿ, ಶುಕ್ರವಾರ, 16 ಅಕ್ಟೋಬರ್ 2009( 19:44 IST )
ಮುಂಬರುವ ಜನಗಣತಿ ಸಂದರ್ಭದಲ್ಲಿ ಎಲ್ಲ 10 ಬೆರಳುಗಳ ಬೆರಳಚ್ಚುಗಳನ್ನು ಅಥವಾ ಕಣ್ಣಿನ ಸ್ಕ್ಯಾನ್ ತೆಗೆಯಬಹುದು. ರಾಷ್ಟ್ರದ ಪ್ರತಿಯೊಬ್ಬ ನಿವಾಸಿಯನ್ನು ಗುರುತಿಸುವ ವಿಶಿಷ್ಠ ಗುರುತಿನ ನಂಬರ್ ನೀಡುವ ಗುರಿ ಹೊಂದಿರುವ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗೆ ಇದು ನೆರವಾಗಲಿದೆ.
ವಿಶಿಷ್ಟ ಗುರುತಿಸುವ ಸಂಖ್ಯೆ ಯೋಜನೆಯು 12-18 ತಿಂಗಳಲ್ಲಿ ಪ್ರಥಮ ಸಂಖ್ಯೆಯನ್ನು ಬಿಡುಗಡೆ ಮಾಡಲಿದ್ದು, ಕೇಂದ್ರದ ಮಹತ್ವದ ಯೋಜನೆ ಎನ್‌ಆರ್‌ಇಜಿ ಫಲಾನುಭವಿಗಳಿಗೆ ಮೊದಲಿಗೆ ಸಿಗಲಿದೆ. ಆದರೆ ನಿರ್ದಿಷ್ಟ 16 ಅಂಕಿಗಳ ನಂಬರ್ ಪೌರತ್ವ ಅಥವಾ ಯಾವುದೇ ಹಕ್ಕುಗಳನ್ನು ನೀಡುವುದಿಲ್ಲವೆಂದು ವಿಶಿಷ್ಠ ಗುರುತು ಕಾರ್ಡ್ ಪ್ರಾಧಿಕಾರದ ಅಧ್ಯಕ್ಷ ನಂದನ್ ನಿಲೇಕಣಿ ತಿಳಿಸಿದ್ದಾರೆ.
ಈ ಯೋಜನೆಗೆ ಹಲವಾರು ಕೋಟಿ ರೂ.ಗಳ ಅಗತ್ಯವಿದ್ದು, ಆರ್ಥಿಕನೆರವು ನೀಡುವವರು ಯಾರು ಎನ್ನುವ ವಿವರಗಳು ನಿಖರವಾಗಿ ಲಭ್ಯವಿಲ್ಲವೆಂದು ಹೇಳಿದ್ದಾರೆ.ನಕಲಿ ಮತ್ತು ಅಜ್ಞಾತ ಫಲಾನುಭವಿಗಳಿಂದ ಬಾಧಿಸುತ್ತಿರುವ ಅಭಿವೃದ್ಧಿ ಯೋಜನೆಗಳನ್ನು ಮತ್ತು ಬಡತನ ನಿವಾರಣೆಯನ್ನು ಗುರಿಇರಿಸಿಕೊಂಡು ಬಡವರ ಮತ್ತು ದುರ್ಬಲರ ಅನುಕೂಲಕ್ಕೆ ಯುಐಡಿ ಯೋಜನೆ ರೂಪಿಸಲಾಗಿದೆ.