ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗೋವಾ ಸ್ಫೋಟ ತನಿಖೆಗೆ ವಿಶೇಷ ತಂಡ: ಒಬ್ಬ ಸೆರೆ (Margao Blast | Goa Blast | Sanathan Sanstha | Malegaon Blast)
Feedback Print Bookmark and Share
 
ಮಾರ್ಗಾವ್‌ನಲ್ಲಿ ಸಂಭವಿಸಿದ ಸ್ಫೋಟಕ್ಕೆ ಸಂಬಂಧಿಸಿದಂತವಿಶೇಷ ತನಿಖಾ ತಂಡವೊಂದನ್ನು ರಚಿಸಲಾಗಿದ್ದು, ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಶುಕ್ರವಾರ ರಾತ್ರಿ ನಡೆದಿದ್ದ ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದರು.

ಸನಾತನ ಸಂಸ್ಥೆ ಎಂಬ ಸಂಘಟನೆ ಆರೋಪಿ ಎಂದು ಹೆಸರಿಸಲಾಗಿರುವ ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳವೂ ಗೋವಾ ಪೊಲೀಸರೊಂದಿಗೆ ಕೈಜೋಡಿಸಿದ್ದು, ಬಂಧಿತನ ಪೂರ್ಣ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಮಾರ್ಗಾವ್ ಪಟ್ಟಣದ ನೇಸೈ ಎಂಬಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸಿ ಒಬ್ಬನನ್ನು ಬಂಧಿಸಿದ್ದರು.

ಪೊಲೀಸರ ಪ್ರಕಾರ, ಈ ಸ್ಫೋಟದಲ್ಲಿ ಮಾಲೆಗಾಂವ್ ಸ್ಫೋಟ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಜೊತೆ ಸಂಬಂಧವಿರುವ ಸನಾತನ ಸಂಸ್ಥೆಯ ಕೈವಾಡವಿದೆ. ಗೋವಾ ಸರಕಾರವು ವಿಶೇಷ ತನಿಖಾ ದಳವೊಂದನ್ನು ರಚಿಸಿದ್ದು, ಎಸ್ಪಿ ಓಂಪ್ರಕಾಶ್ ಕುರ್ತಾರ್ಕರ್ ಅವರು ಈ ತಂಡದ ನೇತೃತ್ವ ವಹಿಸಿದ್ದಾರೆ.

ಸ್ಫೋಟದಲ್ಲಿ ಬಲಿಯಾದ ಇಬ್ಬರು ಕೂಡ ಸನಾತನ ಸಂಸ್ಥೆಯವರೇ ಆಗಿದ್ದು, ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.

ಶುಕ್ರವಾರ ರಾತ್ರಿಯೇ ಈ ಬಂಧನ ನಡೆದಿದ್ದು, ಬಂಧಿತ ಕೂಡ ಸನಾತನ ಸಂಸ್ಥೆಯ ಸದಸ್ಯ ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೆ ಮೊದಲು, ಪೊಲೀಸರು ಶಂಕೆಯಿಂದ ವಿಚಾರಣೆಗಾಗಿ ಐವರನ್ನು ವಶಕ್ಕೆ ತೆಗೆದುಕೊಂಡಿದ್ದರು. ಅವರಲ್ಲಿ ಸಂಸ್ಥೆಯ ರಾಮನಾಥಿ ಆಶ್ರಮದ ಮ್ಯಾನೇಜರ್ ವೀರೇಂದ್ರ ಮರಾಠೆ, ಸಂಸ್ಥೆಯ ಪ್ರಕಾಶನ ಬಳಗದ ಸಂಪಾದಕ ಪೃಥ್ವಿರಾಜ್ ಹಜಾರೆ ಮುಂತಾದವರಿದ್ದರು. ಸನಾತನ ಸಂಸ್ಥೆಯ ಸಾಂಗ್ಲಿ ಆಶ್ರಮದಿಂದಲೂ ಒಬ್ಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸ್ಫೋಟದಲ್ಲಿ ಸಾವಿಗೀಡಾದ ಮಲಗೊಂಡಾ ಪಾಟೀಲ್ ಮತ್ತು ಯೋಗೇಶ್ ನಾಯಕ್ ಎಂಬವರಿಬ್ಬರ ಮೇಲೆ ರಾಜ್ಯದ ವಿರುದ್ಧ ಸಮರ ಸಾರಿದ ಆರೋಪವೂ ಸೇರಿದಂತೆ ಹಲವಾರು ಕೇಸುಗಳನ್ನು ದಾಖಲಿಸಲಾಗಿದೆ. ಆದರೆ, ಈ ಆರೋಪಗಳೆಲ್ಲಾ ನಿರಾಧಾರ, ಒಳಸಂಚು ಎಂದು ಸನಾತನ ಸಂಸ್ಥೆಯು ನಿರಾಕರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ