ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೂರ್ತಿಭಂಗ ಪ್ರತಿಭಟಿಸಿದ್ದಕ್ಕೆ ಅಪವಾದ: ಸನಾತನ ಸಂಸ್ಥೆ (Goa Blast | Sanathan Sanstha | Police | Politics | Idol desecration)
Feedback Print Bookmark and Share
 
ಗೋವಾ ಸ್ಫೋಟ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ, ಇದುವರೆಗೆ ಪೊಲೀಸರು ಸಂಸ್ಥೆಯ ಯಾರನ್ನೂ ಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿರುವ ಸನಾತನ ಸಂಸ್ಥೆ, ಇದು ಇತ್ತೀಚೆಗೆ ಗೋವಾದಲ್ಲಿ ಮೂರ್ತಿ ಭಗ್ನಗೊಳಿಸಿರುವವರನ್ನು ಬಂಧಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ಮಾಡಿದ್ದಕ್ಕಾಗಿ ನಮ್ಮ ಮೇಲೆ ಗೂಬೆ ಕೂರಿಸುವ ಸಂಚು ಎಂದು ಸ್ಪಷ್ಟಪಡಿಸಿದೆ.

ಸೋಮವಾರ ಅಪರಾಹ್ನ ಮುಂಬೈಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸನಾತನ ಸಂಸ್ಥೆಯ ವಕ್ತಾರರು, ನಮ್ಮದು ಭಯೋತ್ಪಾದನಾ ಸಂಘಟನೆಯಲ್ಲ, ಸಂಘಟನೆಗೆ ಸೇರಿದವರು ಮಾಡಿದ ಯಾವುದೇ ಅಪರಾಧ ಕೃತ್ಯಗಳಿಗೆ ನಮ್ಮ ಸಂಸ್ಥೆ ಜವಾಬ್ದಾರವಲ್ಲ ಎಂದು ಸ್ಪಷ್ಟಪಡಿಸಿದರಲ್ಲದೆ ಪೊಲೀಸ್ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿರುವುದಾಗಿ ಸ್ಪಷ್ಟಪಡಿಸಿದರು.

ಮೂರ್ತಿ ಭಗ್ನಗೊಳಿಸಿದ್ದನ್ನು ಪ್ರತಿಭಟಿಸಿದ್ದಕ್ಕನಮಗೆ ಪಾಠ ಕಲಿಸಲೆಂದು, ರಾಜಕೀಯ ಕಾರಣಕ್ಕಾಗಿ ಈ ಘಟನೆಯಲ್ಲಿ ನಮ್ಮ ಹೆಸರನ್ನು ಸಿಲುಕಿಸಲಾಗುತ್ತಿದೆ ಎಂದ ಅವರು, ಮೃತಪಟ್ಟ ಆರೋಪಿ ಮಾಡಿದ ತಪ್ಪಿಗೆ ಸಂಸ್ಥೆಯನ್ನು ದೂಷಿಸುವುದು ಸಲ್ಲ. ಆತನ ಸ್ಕೂಟರಿನಲ್ಲಿ ಬೇರೆ ಯಾರಾದರೂ ಬಾಂಬ್ ಇಟ್ಟಿರಬಹುದು. ಈ ಬಗ್ಗೆ ತನಿಖೆ ನಡೆಯುತ್ತಿದೆ. ಹೀಗಾಗಿ ತನಿಖೆ ಪೂರ್ಣಗೊಂಡು ಸತ್ಯಾಂಶ ಹೊರಬರಲು ಕಾಯುತ್ತಿದ್ದೇವೆ ಎಂದರು.

ಗೋವಾ ಬಾಂಬ್ ಸ್ಫೋಟ ಪ್ರಕರಣವನ್ನು ಸನಾತನ ಸಂಸ್ಥೆ ಖಂಡಿಸುತ್ತದೆ. ಸ್ಫೋಟದ ಹೆಸರಿನಲ್ಲಿ ರಾಜಕೀಯ ಕಾರಣಕ್ಕೆ ನಮ್ಮ ಸಂಸ್ಥೆಗೆ ಅನ್ಯಾಯವಾಗುತ್ತಿದೆ. ಸಂಸ್ಥೆಯ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ. ಈ ಕಾರಣಕ್ಕಾಗಿ ಪತ್ರಿಕಾಗೋಷ್ಠಿ ಕರೆದಿರುವುದಾಗಿ ಅವರು ಸ್ಪಷ್ಟಪಡಿಸಿದರು.

ಗೋವಾ ಗೃಹ ಸಚಿವರು ತಮ್ಮ ಇಲಾಖೆಯ ವೈಫಲ್ಯ ಮುಚ್ಚಿಡಲು ನಮ್ಮ ಸಂಸ್ಥೆಯ ಮೇಲೆ ವಿದೇಶೀ ಸಂಪರ್ಕವಿದೆ ಎಂದೆಲ್ಲಾ ಆರೋಪ ಹೊರಿಸುತ್ತಿದ್ದಾರೆ. ಯಾಕೆಂದರೆ ಈ ಸ್ಫೋಟದ ಹಿಂದಿರುವ ನಿಜ ಆರೋಪಿಗಳನ್ನು ಪತ್ತೆ ಮಾಡುವುದು ಅವರಿಗೆ ಸಾಧ್ಯವಾಗಿಲ್ಲ ಎಂದವರು ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ