ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೇವಾರ್ ಎಕ್ಸ್‌ಪ್ರೆಸ್‌ಗೆ ಗೋವಾ ಎಕ್ಸ್‌ಪ್ರೆಸ್‌ ಡಿಕ್ಕಿ; 21 ಸಾವು (Goa Express | Mewar Express | Mathura | Train collision)
Feedback Print Bookmark and Share
 
ಮಥುರಾ ಬಳಿ ಬುಧವಾರ ಮುಂಜಾನೆ ಗೋವಾ ಎಕ್ಸ್‌ಪ್ರೆಸ್ ಮತ್ತು ಮೇವಾರ್ ಎಕ್ಸ್‌ಪ್ರೆಸ್ ರೈಲುಗಳು ಪರಸ್ಪರ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಕನಿಷ್ಠ 21 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಅಪಘಾತಕ್ಕೀಡಾದ ಬೋಗಿಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

ಉತ್ತರ ಪ್ರದೇಶದ ಮಥುರಾದಲ್ಲಿ ನಿಂತಿದ್ದ ಮೇವಾರ್ ಎಕ್ಸ್‌ಪ್ರೆಸ್ ರೈಲಿಗೆ ಗೋವಾ ಎಕ್ಸ್‌ಪ್ರೆಸ್ ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಘಟನೆಯು ಇಂದು ಮುಂಜಾನೆ ಸಂಭವಿಸಿದೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ವಾಸ್ಕೋಡಗಾಮ - ನಿಜಾಮುದ್ದೀನ್ ಗೋವಾ ಎಕ್ಸ್‌ಪ್ರೆಸ್ ರೈಲು ಉದಯಪುರ ನಗರ - ನಿಜಾಮುದ್ದೀನ್ ಮೇವಾರ್ ಎಕ್ಸ್‌ಪ್ರೆಸ್ ರೈಲಿಗೆ ಹಿಂದಿನಿಂದ ಮುಂಜಾನೆ 4.45ಕ್ಕೆ ಡಿಕ್ಕಿ ಹೊಡೆಯಿತು. ಇವೆರಡೂ ರೈಲುಗಳು ದೆಹಲಿಗೆ ಹೋಗಬೇಕಿತ್ತು ಎಂದು ರೈಲ್ವೇ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಡಿಕ್ಕಿ ಹೊಡೆದ ಪರಿಣಾಮ ಒಂದು ಬೋಗಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಇತರ ಎರಡು ಬೋಗಿಗಳು ಅಲ್ಪ ಪ್ರಮಾಣದ ಹಾನಿಗೊಳಗಾಗಿದೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಹಲವಾರು ಮಂದಿ ಅವಶೇಷಗಳೆಡೆಯಲ್ಲಿ ಸಿಲುಕಿದ್ದು, ಅವರನ್ನು ರಕ್ಷಿಸುವ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

ಗಾಯಾಳುಗಳನ್ನು ಮಥುರಾ ಮತ್ತು ವೃಂದಾವನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ 6 ರೈಲು ಗಾಡಿಗಳ ಮಾರ್ಗವನ್ನು ಬದಲಾಯಿಸಲಾಗಿದ್ದು, ಐದು ರೈಲುಗಳನ್ನು ರದ್ದುಗೊಳಿಸಲಾಗಿದೆ. ದೆಹಲಿ-ಆಗ್ರಾ ನಡುವಿನ ರೈಲು ಸಂಚಾರವನ್ನು ಇದೀಗ ಪುನರಾರಂಭಿಸಲಾಗಿದೆ.

ಇದೀಗ ಪೊಲೀಸರು ಮತ್ತು ಇತರ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಬೋಗಿಗಳನ್ನು ಕಟ್ಟರ್‌ಗಳ ಮೂಲಕ ಒಡೆದು ಅದರೊಳಗಿರುವ ಪ್ರಯಾಣಿಕರನ್ನು ಹೊರಗೆಳೆಯುವ ಕಾರ್ಯ ನಡೆಯುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ