ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚುನಾವಣೆಗೆ ಸ್ಫರ್ಧಿಸ್ತೀರಾ? ಇನ್ನು ಠೇವಣಿ ದುಪ್ಪಟ್ಟು (Parliament | Bill | deposit | LS | Assembly)
Bookmark and Share Feedback Print
 
ND
ಸುಮ್ಮಸುಮ್ಮನೆ ಚುನಾವಣೆಗೆ ಸ್ಫರ್ಧಿಸಲು ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳ ಉತ್ಸಾಹಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಂತಹವರನ್ನು ಅನರ್ಹಗೊಳಿಸುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವ ಮತ್ತು ಚುನಾವಣಾ ನಂತರದ ಸಮೀಕ್ಷೆಗಳಿಗೆ ನಿಯಂತ್ರಣ ಹೇರುವ ಮಸೂದೆಯನ್ನು ಬುಧವಾರ ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ. ಈ ಮಸೂದೆಯು ಚುನಾವಣಾ ಸ್ಫರ್ಧಾಕಾಂಕ್ಷಿಗಳ ಠೇವಣಿ ಮೊತ್ತವನ್ನು ಹೆಚ್ಚಿಸಿದೆ.

ರಾಜ್ಯಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಿದ ಒಂದು ವಾರದ ಬಳಿಕ ಲೋಕಸಭೆಯಲ್ಲಿ ಇದನ್ನು ಅಂಗೀಕರಿಸಲಾಯಿತು. ಚುನಾವಣಾ ವ್ಯವಸ್ಥೆಯಲ್ಲಿನ ಕೆಲವು ಅಪಸವ್ಯಗಳನ್ನು ತೊಡೆದು ಹಾಕಲು ಜನಪ್ರತಿನಿಧಿ ಕಾಯ್ದೆಗೆ ಸರ್ಕಾರವು ಸಮಗ್ರ ತಿದ್ದುಪಡಿ ತರಲಿದೆ ಮತ್ತು ಮುಂಬರುವ ಜೂನ್ ಹಾಗೂ ಜುಲೈ ತಿಂಗಳಲ್ಲಿ ರಾಷ್ಟ್ರೀಯ ಸಲಹೆಯನ್ನು ಪಡೆಯಲಾಗುವುದು ಎಂಬುದಾಗಿ ಕಾನೂನು ಸಚಿವ ವೀರಪ್ಪ ಮೊಯ್ಲಿ ಈ ಸಂದರ್ಭದಲ್ಲಿ ನುಡಿದರು.

ಚುನಾವಣಾ ಅಕ್ರಮಗಳನ್ನು ತಡೆಯಲು ಚುನಾವಣೆ ವೇಳೆ ಬೆರಳಚ್ಚು ಬಳಸುವಿಕೆಯನ್ನು ಸರ್ಕಾರ ಪರಿಗಣಿಸುತ್ತಿದೆ ಎಂದು ತಿಳಿಸಿದ ಮೊಯ್ಲಿ ಚುನಾವಣಾ ಗುರುತು ಚೀಟಿಯನ್ನು ಒಂದು ಜೀವನಪರ್ಯಂತ ದಾಖಲೆಯಾಗಿಸಲು ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ತಿದ್ದುಪಡಿಯ ಪ್ರಕಾರ ಲೋಕಸಭಾ ಚುನಾವಣಾ ಠೇವಣಿಯನ್ನು 10,000ದಿಂದ 25,000ಕ್ಕೆ ಏರಿಸಲಾಗಿದೆ. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳ ಠೇವಣಿಯನ್ನು 5,000ದಿಂದ 12,500ಕ್ಕೇರಿಸಲಾಗಿದೆ.

ಇದೇವೇಳೆ, ವಿಧಾನಸಭಾ ಚುನಾವಣಾ ಸ್ಫರ್ಧಾಕಾಂಕ್ಷಿಗಳ ಠೇವಣಿಯನ್ನು 5,000ದಿಂದ 10,000ಕ್ಕೇರಿಸಲಾಗಿದೆ. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳು ಇನ್ನು ಮುಂದೆ 2,500ಕ್ಕೆ ಬದಲಾಗಿ 5,000 ರೂಪಾಯಿ ಠೇವಣಿ ನೀಡಬೇಕಾಗುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ