ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಂಜುನಾಥ್ ಹತ್ಯೆ ಪ್ರಕರಣ; ಮೋನು ಗಲ್ಲು ಶಿಕ್ಷೆ ಜೀವಾವಧಿಗೆ (Manjunath Mishra | IOC | Karnataka | Petrol mafia)
Bookmark and Share Feedback Print
 
ಪೆಟ್ರೋಲ್ ಕಲಬೆರಕೆ ಮಾಫಿಯಾವನ್ನು ಬಹಿರಂಗಪಡಿಸಲು ಯತ್ನಿಸಿದ್ದ ಕೋಲಾರದ ಮಂಜುನಾಥ್ ಷಣ್ಮುಗಂ ಎಂಬವರನ್ನು ಕೊಲೆ ಮಾಡಿದ ಪ್ರಮುಖ ಆರೋಪಿಯ ಮರಣದಂಡನೆಯನ್ನು ಅಲಹಾಬಾದ್ ಉಚ್ಛ ನ್ಯಾಯಾಲಯದ ಲಕ್ನೋ ಪೀಠವು ಜೀವಾವಧಿಗೆ ಇಳಿಸಿ ಆದೇಶ ಹೊರಡಿಸಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಧಿಕಾರಿಯಾಗಿದ್ದ ಕರ್ನಾಟಕದ ಮಂಜುನಾಥ್ ಎಂಬುವವರನ್ನು 2005ರಲ್ಲಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಎಂಟು ಮಂದಿ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣ ದಂಡನೆ ಶಿಕ್ಷೆಯನ್ನೆದುರಿಸುತ್ತಿದ್ದ ಮೋನು ಮಿತ್ತಲ್ ಮೇಲ್ಮನವಿಯನ್ನು ಪರಿಶೀಲಿಸಿದ ಅಲಹಾಬಾದ್ ಹೈಕೋರ್ಟ್ ಅದನ್ನು ಮನ್ನಿಸಿದ್ದು, ಜೀವಾವಧಿ ಶಿಕ್ಷೆಗೆ ಇಳಿಸಿದೆ. ಆದರೆ ಪೆಟ್ರೋಲ್ ಪಂಪ್ ಮಾಲಕ ಪವನ್ ಸೇರಿದಂತೆ ಇತರ ಐವರಿಗೆ ನೀಡಲಾಗಿದ್ದ ಕೆಳಗಿನ ನ್ಯಾಯಾಲಯ ಈ ಹಿಂದೆ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಊರ್ಜಿತಗೊಳಿಸಿದೆ.

ಆದರೆ ಇತರ ಇಬ್ಬರು ಸಹ ಆರೋಪಿಗಳಾದ ಸಂಜಯ್ ಆವಸ್ತಿ ಮತ್ತು ಹರೀಶ್ ಮಿಶ್ರಾರನ್ನು ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆರೋಪ ಮುಕ್ತಗೊಳಿಸಿದೆ.

ಐಐಎಂ ಪದವೀಧರರಾಗಿದ್ದ ಮಂಜುನಾಥ್ ಐಒಸಿಯಲ್ಲಿ ಮಾರುಕಟ್ಟೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರು ಪವನ್ ಮಾಲಕತ್ವದ ಲಖೀಂಪುರ ಕೇರಿ ಎಂಬಲ್ಲಿನ ಐಒಸಿ ಪೆಟ್ರೋಲ್ ಪಂಪ್‌ನಲ್ಲಿ ಕಲಬೆರಕೆ ಮಾಫಿಯಾವನ್ನು ಪತ್ತೆ ಹಚ್ಚಿದ್ದರು.

ಕೊಲೆ ಆರೋಪಿಯೊಬ್ಬನ ಶಿಕ್ಷೆಯನ್ನು ಕಡಿಮೆಗೊಳಿಸಿರುವುದು ಮತ್ತು ಇಬ್ಬರನ್ನು ಆರೋಪ ಮುಕ್ತಗೊಳಿಸಿರುವ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಕುರಿತು ಇನ್ನೂ ನಿರ್ಧರಿಸಿಲ್ಲ ಎಂದು ಮಂಜುನಾಥ್ ತಂದೆ ತಿಳಿಸಿದ್ದಾರೆ.

ನವೆಂಬರ್ 19, 2005ರಂದು ಕಲಬೆರಕೆ ಪೆಟ್ರೋಲ್ ಮಾದರಿಯನ್ನು ಸಂಗ್ರಹಿಸಲು ಗ್ಯಾಸ್ ಸ್ಟೇಷನ್‌ಗೆ ಮಂಜುನಾಥ್ ಬಂದಿದ್ದಾಗ ಅವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ