ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೆಲಂಗಾಣ 'ರಾಜ್ಯ'ಕೀಯ; 20 ಸಚಿವರಿಂದ ರಾಜಿನಾಮೆ? (Andhra Pradesh | Telangana | Rayalseema | Coastal Andhra)
Bookmark and Share Feedback Print
 
ತೆಲಂಗಾಣ ನೂತನ ರಾಜ್ಯ ರಚನೆ ವಿವಾದ ಆಂಧ್ರಪ್ರದೇಶದಲ್ಲಿ ಶನಿವಾರ ಮಹತ್ವದ ತಿರುವನ್ನು ಪಡೆದುಕೊಂಡಿದ್ದು, ಆಂಧ್ರ ಕರಾವಳಿ ಮತ್ತು ರಾಯಲಸೀಮೆ ಪ್ರಾಂತ್ಯದ 20 ಸಚಿವರುಗಳು ರಾಜಿನಾಮೆಗೆ ಮುಂದಾಗಿದ್ದಾರೆ.

ಆಂಧ್ರಪ್ರದೇಶವನ್ನು ವಿಭಜಿಸುವ ನಿರ್ಧಾರಕ್ಕೆ ಕೇಂದ್ರ ಒಪ್ಪಿಗೆ ಸೂಚಿಸಿದ ಬಳಿಕ ಸ್ಥಾನಗಳನ್ನು ತ್ಯಜಿಸಬೇಕೆಂದು ಜನತೆಯಿಂದ ತೀವ್ರ ಒತ್ತಡ ಎದುರಿಸುತ್ತಿರುವ ಸಚಿವರು ಇಂದು ಅಪರಾಹ್ನ ಇಲ್ಲಿ ಹೊಟೇಲೊಂದರಲ್ಲಿ ಸಭೆ ಸೇರಿ ರಾಜಿನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ.

ನಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಲು ನಿರ್ಧರಿಸಿದ್ದೇವೆ. ನಮ್ಮ ನಿರ್ಧಾರವನ್ನು ಮುಖ್ಯಮಂತ್ರಿ ಕೆ. ರೋಸಯ್ಯನವರ ಗಮನಕ್ಕೆ ತರುವಂತೆ ಸಹ ಸಚಿವರಾದ ಧರ್ಮಣ ಪ್ರಸಾದ ರಾವ್, ಗಾಡೆ ವೆಂಕಟ ರೆಡ್ಡಿ ಮತ್ತು ಸಿ. ಶಿಲ್ಪಾ ಮೋಹನ್ ರೆಡ್ಡಿಯವರಿಗೆ ಹೇಳಿದ್ದೇವೆ ಎಂದು ಸಭೆಯ ನಂತರ ರಾಜ್ಯ ನಗರಾಡಳಿತ ಸಚಿವ ಆನಂ ರಾಮನಾರಾಯಣ ರೆಡ್ಡಿ ಪತ್ರಕರ್ತರಿಗೆ ತಿಳಿಸಿದ್ದಾರೆ.

ಇದರ ಬೆನ್ನಿಗೆ ಧರ್ಮಣ, ಗಾಡೆ ಮತ್ತು ಮೋಹನ್‌ರವರು ಮುಖ್ಯಮಂತ್ರಿಯವರನ್ನು ಭೇಟಿಯಾಗಲು ಅವರ ಕಚೇರಿಯತ್ತ ತೆರಳಿದ್ದಾರೆ.

ರೋಸಯ್ಯನವರನ್ನು ಸಚಿವರು ಭೇಟಿ ಮಾಡಿದರೂ, ತಾವು ರಾಜಿನಾಮೆ ಕುರಿತು ಅವರೊಂದಿಗೆ ಮಾತುಕತೆ ನಡೆಸಿಲ್ಲ ಎಂದು ಈ ಮೂವರು ಹೇಳಿಕೊಂಡಿದ್ದಾರೆ. ತಾವು ಸಂಜೆ ಅವರನ್ನು ಭೇಟಿಯಾಗಿ ರಾಜಿನಾಮೆ ವಿಚಾರವನ್ನು ಚರ್ಚಿಸಲಿದ್ದೇವೆ ಎಂದು ಧರ್ಮಣ ವಿವರಣೆ ನೀಡಿದರು.

ಮುಖ್ಯಮಂತ್ರಿಯವರು ಕೂಡ ಇದರ ಕುರಿತು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ನೂತನ ರಾಜ್ಯ ರಚನೆಯನ್ನು ವಿರೋಧಿಸಿ ಈಗಾಗಲೇ ತೆಲಂಗಾಣೇತರ ಪ್ರಾಂತ್ಯಗಳ 130 ಶಾಸಕರು ಮತ್ತು ಐವರು ಸಂಸದರು ರಾಜಿನಾಮೆ ಸಲ್ಲಿಸಿದ್ದು, ಸಚಿವರುಗಳ ರಾಜಿನಾಮೆ ನಿರ್ಧಾರದೊಂದಿಗೆ ವಿಭಜನೆ ಹೊಸ ತಿರುವನ್ನು ಪಡೆದುಕೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ