ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರತ್ಯೇಕ ಪೂರ್ವಾಂಚಲ್ ರಾಜ್ಯ ಬೇಕು: ಪಿಎಂಗೆ ಮಾಯಾ ಪತ್ರ (Poorvanchal state | mayawati | Uttar Pradesh | Bundelkhand)
ಬುಂದೇಲ್‌ಖಂಡ್ ಮತ್ತು ಪೂರ್ವಾಂಚಲ್ ಅನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕೆಂದು ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೇ, ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಕೂಡ ಧ್ವನಿಗೂಡಿಸಿದ್ದು ತಮಗೂ ಉತ್ತರ ಪ್ರದೇಶ ವಿಭಜನೆ ಮಾಡಿ ಪೂರ್ವಾಂಚಲ್ ರಾಜ್ಯಕ್ಕಾಗಿ ಆಗ್ರಹಿಸಿ ಪ್ರಧಾನಿಗೆ ಎರಡನೇ ಪತ್ರ ಬರೆದಿದ್ದಾರೆ.
ಪ್ರತ್ಯೇಕ ಪೂರ್ವಾಂಚಲ್ ರಾಜ್ಯ ರಚನೆಗಾಗಿ ಕೇಂದ್ರ ಸರ್ಕಾರ ಅನುಮತಿ ನೀಡಬೇಕೆಂದು ಕೋರಿ ಮಾಯಾವತಿ ಅವರು, ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆಯುವ ಮೂಲಕ ಉತ್ತರ ಪ್ರದೇಶ ವಿಭಜನೆಗೂ ಮಾಯಾ ಮುಂದಾದಂತಾಗಿದೆ.
ಪ್ರತ್ಯೇಕ ಪೂರ್ವಾಂಚಲ್ ರಾಜ್ಯಕ್ಕೆ ಆಗ್ರಹಿಸಿ ಮಾಯಾವತಿ ಅವರು ಪ್ರಧಾನಿಗೆ ಪತ್ರ ಬರೆದಿರುವುದಾಗಿ ಕ್ಯಾಬಿನೆಟ್‌ನ ಹೆಚ್ಚುವರಿ ಕಾರ್ಯದರ್ಶಿ ವಿಜಯ್ ಶಂಕರ್ ಪಾಂಡೆ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿರುವಂತೆಯೇ ಬುಂದೇಲ್‌ಖಂಡ್ ಮತ್ತು ಉತ್ತರಪ್ರದೇಶದಲ್ಲಿ ಪೂರ್ವಾಂಚಲ್ ಅನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಲು ಕೇಂದ್ರ ಮುಂದಾಗಬೇಕೆಂದು ಕೋರಿ ಶುಕ್ರವಾರ ಕೂಡ ಪ್ರಧಾನಿಗೆ ಪತ್ರ ಬರೆದಿದ್ದರು. ತಾವು ಸಣ್ಣ ರಾಜ್ಯಗಳ ರಚನೆಗೆ ಬೆಂಬಲ ನೀಡುವುದಾಗಿಯೂ ಈ ಸಂದರ್ಭದಲ್ಲಿ ವಿವರಿಸಿದ್ದರು.