ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾನು ಹುಟ್ಟಿದಾಗ್ಲೇ ಕಾವೇರಿ ವಿವಾದ ಆರಂಭವಾಯ್ತು: ಕರುಣಾ (Tamil Nadu | M Karunanidhi | Cauvery river water | Karnataka)
Bookmark and Share Feedback Print
 
ನಾನು ಹುಟ್ಟುತ್ತಿದ್ದಾಗಲೇ ಕರ್ನಾಟಕ ಜತೆಗಿನ ಕಾವೇರಿ ವಿವಾದವೂ ಆರಂಭವಾಗಿತ್ತು. ಹಾಗಾಗಿ ಅದು ಪರಿಹಾರ ಕಾಣುವವರೆಗೆ ಹೋರಾಟವನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ವಿವಾದ ಅಂತ್ಯ ಕಾಣುವವರೆಗೆ ವಿರಮಿಸುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಕೆ. ಕರುಣಾನಿಧಿ ಘೋಷಿಸಿದ್ದಾರೆ.

ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಮೈಸೂರು ರಾಜ್ಯಗಳು 1924ರಲ್ಲಿ ಕಾವೇರಿ ನೀರನ್ನು ಹಂಚಿಕೊಳ್ಳುವ ಒಪ್ಪಂದಕ್ಕೆ ಬಂದ ಬಳಿಕ ವಿವಾದಗಳು ಕಾಣಿಸಿಕೊಂಡಿದ್ದವು. ಅದೇ ವರ್ಷ ನಾನು ಹುಟ್ಟಿದ್ದೆ. ಹಾಗಾಗಿ ಕಾವೇರಿ ವಿವಾದಕ್ಕೂ ಈಗ ನನ್ನಷ್ಟೇ ಪ್ರಾಯವಾಗಿದೆ. ಆದರೆ ಯಾವುದೇ ಕಾರಣಕ್ಕೂ ಹೋರಾಟವನ್ನು ಕೈ ಬಿಡುವ ಪ್ರಶ್ನೆಯಿಲ್ಲ ಎಂದು ಅವರು ಪುನರುಚ್ಛರಿಸಿದ್ದಾರೆ.
Karuna
PTI


ಈ ಒಪ್ಪಂದದ ಬಳಿಕ ಸಮಸ್ಯೆಗಳು ಕಾಣಿಸಿಕೊಂಡವು. ಅದೇ ವರ್ಷ ನಾನೂ ಹುಟ್ಟಿದ್ದೆ ಎಂದು ಎಂದು ಸೇಲಂ ಸಮೀಪದ ಮೆಟ್ಟೂರು ಅಣೆಕಟ್ಟಿನ ಅಮೃತ ಮಹೋತ್ಸವ ಆಚರಣೆಯನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ ಬಳಿಕ ಕರುಣಾನಿಧಿ ತಿಳಿಸಿದರು.

1910ರಲ್ಲಿ ಅಣೆಕಟ್ಟು ನಿರ್ಮಿಸುವ ಸಂಬಂಧ ಬ್ರಿಟೀಷ್ ಸರಕಾರವು ಮೊದಲು ಕರಡು ಪ್ರಸ್ತಾವನೆಯನ್ನು ಸಿದ್ಧಪಡಿಸಿತ್ತು. ಮೈಸೂರು ಆಡಳಿತವು ಇದೇ ಸಂದರ್ಭದಲ್ಲಿ ಕಾವೇರಿ ನೀರನ್ನು ಮೈಸೂರು ಸಮೀಪದ ಕೃಷ್ಣರಾಜ ಸಾಗರದ ಬಳಿ ಶೇಖರಿಸಿಡಲು ಅಣೆಕಟ್ಟು ನಿರ್ಮಿಸುವ ಪ್ರಸ್ತಾಪವನ್ನು ಬ್ರಿಟೀಷರ ಮುಂದಿಟ್ಟಿತ್ತು ಎಂಬುದನ್ನು ಅವರು ವಿವರಿಸಿದರು.

ಮಂಜೂರುಗೊಂಡಿದ್ದ ಆರು ಕೋಟಿ ರೂಪಾಯಿಗಳಿಂದ 1934ರಲ್ಲಿ ಮೆಟ್ಟೂರು ಅಣೆಕಟ್ಟು ನಿರ್ಮಾಣ ಪೂರ್ಣಗೊಂಡಿತ್ತು.

ಇತ್ತೀಚಿನ ವರ್ಷಗಳಲ್ಲಿ ಕಾವೇರಿ ನೀರು ಹಂಚಿಕೆ ವಿವಾದ ತಾರಕಕ್ಕೇರುತ್ತಿದ್ದು, ಉಭಯ ರಾಜ್ಯಗಳಲ್ಲಿ ಅಶಾಂತಿ ಸೃಷ್ಟಿಯಾಗುತ್ತಿರುವುದು ಸಾಮಾನ್ಯವಾಗುತ್ತಿದೆ. ಪ್ರಕರಣ ನ್ಯಾಯಾಲಯದಲ್ಲಿದೆಯಾದರೂ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳಲು ಯತ್ನಿಸುವುದಾಗಿ ಇತ್ತೀಚೆಗಷ್ಟೇ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಹೇಳಿರುವುದನ್ನು ಇದೀಗ ಸ್ಮರಿಸಬಹುದಾಗಿದೆ.

ಸಂಬಂಧಿತ ಮಾಹಿತಿ ಹುಡುಕಿ