ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೆಂಗಳೂರಿನಲ್ಲಿ ವೈಮಾನಿಕ ತರಬೇತಿ ಪಡೆದಿದ್ದ ಉಗ್ರ ಸೆರೆ (aerial strike | Shehzad alias Pappu | Batla House encounter | Terrorist)
Bookmark and Share Feedback Print
 
ಭಾರತದ ಮೇಲೆ ವೈಮಾನಿಕ ಭಯೋತ್ಪಾದನಾ ದಾಳಿಗಳು ನಡೆಯಲಿವೆ ಎಂಬ ವರದಿಗಳ ಬೆನ್ನಿಗೇ ಇಂಡಿಯನ್ ಮುಜಾಹಿದೀನ್ (ಐಎಂ)ನ ವಾಯು ದಾಳಿ ವಿಭಾಗದ ಮುಖ್ಯಸ್ಥನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದು, ಈತ ಬೆಂಗಳೂರಿನಲ್ಲಿಯೇ ವೈಮಾನಿಕ ಪೈಲಟ್ ತರಬೇತಿ ಪಡೆದಿದ್ದ ಎಂಬ ಅಂಶ ತನಿಖೆಯಿಂದ ಬಹಿರಂಗವಾಗಿದೆ.

ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಗೆ ಸೇರಿದ ಶೆಹ್ಜಾದ್ ಅಹ್ಮದ್ ಆಲಿಯಾಸ್ ಪಪ್ಪು ಎಂಬಾತನನ್ನು ಸೋಮವಾರ ಸಂಜೆ ಪೊಲೀಸರು ಆತ ಹುಟ್ಟೂರಿನಿಂದ ಬಂಧಿಸಿದ್ದಾರೆ.

2008ರ ದೆಹಲಿ ಸರಣಿ ಸ್ಫೋಟ ಮತ್ತು ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣಗಳ ಪ್ರಮುಖ ಆರೋಪಿಯಾಗಿರುವ ಈತನ ಮಾಹಿತಿ ನೀಡಿದವರಿಗೆ ದೆಹಲಿ ಸರಕಾರ ಐದು ಲಕ್ಷ ರೂಪಾಯಿಗಳ ಘೋಷಿಸಿತ್ತು.

2005ರ ಬಳಿಕ ಭಾರತದಲ್ಲಿ ನಡೆದ ಬಹುತೇಕ ಎಲ್ಲಾ ಭಯೋತ್ಪಾದಕ ದಾಳಿಗಳ ಮಾಸ್ಟರ್ ಮೈಂಡ್ ಎಂದು ಹೇಳಲಾಗಿರುವ ಹಿಜ್ಬುಲ್ ಮುಜಾಹಿದೀನ್ ಪ್ರಮುಖ ಮಿರ್ಜಾ ಶಾಬಾದ್ ಬೇಗ್ ಜತೆ ಶೆಹ್ಜಾದ್ ನಿಕಟ ಸಂಬಂಧ ಹೊಂದಿದ್ದ ಎಂದು ಆರೋಪಿಸಲಾಗಿದ್ದು, ದೇಶದಲ್ಲಿ ಭಯಾನಕ ವೈಮಾನಿಕ ದಾಳಿ ನಡೆಸಲು ಸಂಚು ರೂಪಿಸಿದ್ದ, ಇದೇ ಹಿನ್ನೆಲೆಯಲ್ಲಿ ಆತ ಬೆಂಗಳೂರಿನ ವೈಮಾನಿಕ ಅಕಾಡೆಮಿಯೊಂದರಲ್ಲಿ ತರಬೇತಿಯನ್ನೂ ಪಡೆದಿದ್ದ ಎಂದು ತನಿಖಾ ಸಂಸ್ಥೆಗಳು ತಿಳಿಸಿವೆ.

ಶೆಹ್ಜಾದ್‌ನ ಇಂಟರ್ನೆಟ್ ಖಾತೆಗಳನ್ನು ಗುಪ್ತಚರ ಸಂಸ್ಥೆಗಳು ಪರಿಶೀಲನೆ ನಡೆಸಿದಾಗ ಆತ ಬೆಂಗಳೂರಿನಲ್ಲಿ ಪೈಲಟ್ ತರಬೇತಿ ಅರ್ಹತೆ ಪಡೆದಿರುವುದು ಬೆಳಕಿಗೆ ಬಂದಿದೆ. ಆತ ಕಾಕ್‌ಪಿಟ್‌ನಲ್ಲಿರುವ ಹಲವು ಭಾವಚಿತ್ರಗಳು, ರೇಡಿಯೋ ಸಿಗ್ನಲ್‌ಗಳನ್ನು ಕಳುಹಿಸುತ್ತಿರುವ ಚಿತ್ರಗಳು ಹಾಗೂ ಇತರ ಟ್ರೈನೀ ಪೈಲಟ್‌ಗಳ ಜತೆ ಕಾಕ್‌ಪಿಟ್‌ನಲ್ಲಿರುವ ಫೋಟೋಗಳು ಲಭ್ಯವಾಗಿವೆ. ಆತನ ಇಮೇಲ್ ಹಾಗೂ ಸಾಮಾಜಿಕ ಸಂಪರ್ಕ ತಾಣಗಳಿಂದ ಇವುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆದರೆ ಆತ ಬೆಂಗಳೂರಿನಲ್ಲಿ ಯಾವ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದಾನೆ ಎಂದು ಪೊಲೀಸರು ಬಹಿರಂಗಪಡಿಸಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ