ಮುಂದಿನ 2011ರ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಮರ ಮತವನ್ನು ಸೆಳೆಯುವ ನಿಟ್ಟಿನಲ್ಲಿ ಪಶ್ಚಿಮಬಂಗಾಳದ ಎಡಪಂಥೀಯ ಸರ್ಕಾರ ಒಬಿಸಿ ಪಂಗಡಕ್ಕೆ ನಾಲ್ಕು ಮುಸ್ಲಿಂ ಗುಂಪುಗಳನ್ನು ಸೇರ್ಪಡೆ ಮಾಡಲು ನಿರ್ಧರಿಸಿದೆ. ಏತನ್ಮಧ್ಯೆ ಪಶ್ಚಿಮ ಬಂಗಾಳ ಪರಿಶಿಷ್ಟ ಪಂಗಡಗಳ ಆಯೋಗ ಈಗಾಗಲೇ ನಾಲ್ಕು ಮುಸ್ಲಿಂ ಗುಂಪುಗಳನ್ನು ಆಯ್ಕೆ ಮಾಡಿದ್ದು, ಈ ಕುರಿತ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ.