ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಎಸ್ಪಿ ಸೇರಲ್ಲ,ಅಮರ್ ಸಿಂಗ್ ಚಿತ್ತ ಕಾಂಗ್ರೆಸ್‌ನತ್ತ! (BSP | Congress | Sp, Amar singh | Mulayam singh)
Bookmark and Share Feedback Print
 
ಸಮಾಜವಾದಿ ಪಕ್ಷದಿಂದ ಕೊನೆಗೂ ಹೊರಬಿದ್ದಿರುವ ಅಮರ್ ಸಿಂಗ್, ಬಿಎಸ್ಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ, ಕಾಂಗ್ರೆಸ್‌ನತ್ತ ತಮ್ಮ ಚಿತ್ತ ಇರುವುದಾಗಿ ಮುನ್ಸೂಚನೆ ನೀಡಿದ್ದಾರೆ.

ಆದರೆ ಮಾಯಾವತಿ ನೇತೃತ್ವದ ಬಿಎಸ್‌ಪಿ ಜೊತೆ ಸೇರಿಕೊಂಡು ಉತ್ತರ ಪ್ರದೇಶವನ್ನು ಮೂರು ಸಣ್ಣ ರಾಜ್ಯ ಮಾಡಲು ಹೋರಾಡುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ಕಾಂಗ್ರೆಸ್‌ನಲ್ಲ ರಾಹುಲ್ ಗಾಂಧಿ ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದರೆ, ಚುನಾವಣೆ ವೇಳೆ ರಣತಂತ್ರವನ್ನು ಕೋರ್ ಕಮಿಟಿ ನಿರ್ಧರಿಸುತ್ತದೆ ಎಂದರು. ಪಕ್ಷದ ಅಧ್ಯಕ್ಷರು ದಿನಕ್ಕೊಂದು ಹೇಳಿಕೆ ನೀಡುತ್ತ ಗೊಂದಲ ಸೃಷ್ಟಿಸುತ್ತಾರೆ ಎಂದು ಮುಲಾಯಂಗೆ ಪರೋಕ್ಷವಾಗಿ ತಿರುಗೇಟು ನೀಡಿದ ಅಮರ್, ಕಾಂಗ್ರೆಸ್‌ನಲ್ಲಿ ಇಧಕ್ಕೆಲ್ಲಾ ಅವಕಾಶ ಇಲ್ಲ ಎಂದು ಹೊಗಳಿದ್ದಾರೆ.

ಅನಾರೋಗ್ಯದ ಕಾರಣ ನೀಡಿ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದ ಅಮರ್ ಸಿಂಗ್ ಮತ್ತು ಅವರ ಬೆಂಬಲಿಗ ಸಂಸದೆ ಜಯಪ್ರದಾ ಅವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆಂಬ ಆಪಾದನೆ ಮೇರೆಗೆ ಸಮಾಜವಾದಿ ಪಕ್ಷ ಮಂಗಳವಾರ ಇಬ್ಬರನೂ ಉಚ್ಛಾಟಿಸಿತ್ತು.

ಇದರಿಂದಾಗಿ ಸುಮಾರು ಎರಡು ದಶಕಗಳ ಕಾಲದ ಮುಲಾಯಂ ಮತ್ತು ಅಮರ್ ಸಿಂಗ್ ನಡುವಿನ ಗೆಳೆತನ ಮುರಿದುಬಿದ್ದಂತಾಗಿತ್ತು. ಇದೀಗ ಪಕ್ಷದಿಂದ ಹೊರಬಿದ್ದಿರುವ ಅಮರ್ ಸಿಂಗ್ ಅವರ ನಡೆಯನ್ನು ಅನುಸರಿಸಿರುವ, ಜಯಪ್ರದಾ, ಸಂಜಯ್ ದತ್ತ ಸೇರಿದಂತೆ ಹಲವರು ಸಮಾಜವಾದಿ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಇನ್ನೇನಿದ್ದರೂ ಅಮರ್ ಸಿಂಗ್ ಚಿತ್ತ ಯಾವ ಪಕ್ಷದತ್ತ ಎಂಬುದೇ ಕುತೂಹಲದ ಪ್ರಶ್ನೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ