ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜನಶಕ್ತಿಯಿಂದ ಶಿವಸೇನೆ ವಿರೋಧಿಸಿ, ಹಿಂಸಾಚಾರದಿಂದಲ್ಲ: ರಾಹುಲ್ (Shiv Sena | Mumbai | Congress | Rahul Gandhi)
Bookmark and Share Feedback Print
 
PTI
'ಮುಂಬೈ ಮರಾಠಿಗರಿಗೆ ಮಾತ್ರ' ಎಂಬ ಶಿವಸೇನೆಯ ಘೋಷಣೆಯನ್ನು ಅದರ ತವರಿನಲ್ಲೇ ಮಸುಕು ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜನರನ್ನು ಸಂಘಟಿಸುವ ಮೂಲಕ ಶಿವಸೈನಿಕರನ್ನು ವಿರೋಧಿಸಬೇಕು ಎಂದು ಕರೆ ನೀಡಿದ್ದಾರೆ.

ಶಿವಸೇನೆಯ ಉದ್ಧಟತನವನ್ನು ಜನತೆ ಒಗ್ಗಟ್ಟಿನಿಂದ ಎದುರಿಸಬೇಕು, ಹಿಂಸಾಚಾರದಿಂದಲ್ಲ ಎಂದು ಕೇರಳದ ಎರ್ನಾಕುಲಂ ಜಿಲ್ಲೆಯ ಎಡ್ತಳದಲ್ಲಿ ತಿಳಿಸಿದ್ದಾರೆ.

ನಿನ್ನೆ ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಿವಸೇನೆಯ ಪ್ರತಿಭಟನೆಯನ್ನು ವಿವರಿಸಿದ ಅವರು, ನಾನು ಮುಂಬೈಯ ಉಪನಗರದ ರೈಲುಗಳಲ್ಲಿ ಪ್ರಯಾಣಿಸುವಾಗ 15-20 ಶಿವಸೈನಿಕರಷ್ಟೇ ಕರಿ ಪತಾಕೆ ತೋರಿಸುತ್ತಿದ್ದರು. ಆದರೆ ಅಲ್ಲಿ ಸಾವಿರಾರು ಮಂದಿ ನನ್ನನ್ನು ಬೆಂಬಲಿಸುವವರಿದ್ದರು ಎಂದರು.

ಇದು ನಾವು ಅವರನ್ನು ಹೇಗೆ ವಿರೋಧಿಸಬೇಕು ಎಂಬುದಕ್ಕೆ ಉದಾಹರಣೆ. ನಾವು ಅವರನ್ನು ವಿರೋಧಿಸಲೇಬೇಕು, ಆದರೆ ಬಲಪ್ರಯೋಗದಿಂದಲ್ಲ, ಜನರನ್ನು ಜಮಾಯಿಸುವ, ಸಂಘಟಿಸುವ ಮೂಲಕ ಇದನ್ನು ಸಾಧಿಸಬೇಕು ಎಂದು ವಿದ್ಯಾರ್ಥಿ ನಾಯಕರುಗಳ ಜತೆ ಮಾತನಾಡುತ್ತಾ ತಿಳಿಸಿದರು.

ಮುಂಬೈ ಮರಾಠಿಗರಿಗೆ ಮಾತ್ರ ಎಂಬ ಶಿವಸೇನೆಯ ನಿಲುವನ್ನು ತೀವ್ರವಾಗಿ ವಿರೋಧಿಸಿದ್ದ ರಾಹುಲ್ ಗಾಂಧಿ ಮುಂಬೈ ಭೇಟಿಗೆ ಅವಕಾಶ ನೀಡುವುದಿಲ್ಲ ಎಂದು ಶಿವಸೇನೆ ಬೆದರಿಕೆ ಹಾಕಿತ್ತು. ಆದರೆ ಇದ್ಯಾವುದನ್ನೂ ಲೆಕ್ಕಿಸದೆ ರಾಹುಲ್ ಮುಂಬೈಯ ಲೋಕಲ್ ರೈಲುಗಳಲ್ಲಿ ಪ್ರಯಾಣಿಸಿ ಜನರಲ್ಲಿ ಸಂಚಲನ ಮೂಡಿಸುವ ಮೂಲಕ ಶಿವಸೇನೆಯ ಶಕ್ತಿಯನ್ನು ಕುಂದಿಸಿದ್ದರು.

ಭಾರತವು ಎಲ್ಲಾ ಭಾರತೀಯರಿಗೆ ಸೇರಿದ್ದು. ನೀವು ಭಾರತೀಯನಾಗಿದ್ದರೆ, ನೀವು ದೇಶದ ಯಾವುದೇ ಭಾಗದಲ್ಲಿ ನಿಮ್ಮ ರಾಜ್ಯದಲ್ಲಿದ್ದಂತೆ ಬದುಕಬಹುದಾಗಿದೆ. ನೀವು ಕೇರಳೀಯನಾಗಿರಬಹುದು, ತಮಿಳಿಯನ್ ಆಗಿರಬಹುದು ಅಥವಾ ಪಂಜಾಬಿಯನ್ ಆಗಿರಬಹುದು, ಯಾವುದೇ ಅಡ್ಡಿಯಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ