ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಕ್ಕಳ ಪಾಲನೆ; ತಾಯಂದಿರಿಗೆ ಸರಕಾರ ಎರಡು ವರ್ಷ ರಜೆ..! (child-care leave | women | Haryana government | child care leave)
Bookmark and Share Feedback Print
 
ಮಕ್ಕಳ ಲಾಲನೆ-ಪಾಲನೆಗಾಗಿ ಸರಕಾರಿ ಮಹಿಳಾ ನೌಕರರು ಎರಡು ವರ್ಷಗಳ ಕಾಲ ರಜೆಯನ್ನು ಪಡೆದುಕೊಳ್ಳಬಹುದು. ಈ ರಜೆಯನ್ನು ಸೇವೆಯ ಯಾವುದೇ ಅವಧಿಯಲ್ಲಿ ಬೇಕಾದರೂ ಬಳಸಬಹುದು ಎಂದು ಹರ್ಯಾಣ ಸರಕಾರ ತಾಯಂದಿರಿಗೆ ನೂತನ ರಜಾ ಪ್ಯಾಕೇಜ್ ಪ್ರಕಟಿಸಿದೆ.

ರಾಜ್ಯ ಸರಕಾರದ ಮಹಿಳಾ ನೌಕರರು ತಾಯಿಯಾದ ನಂತರ ಈ ವಿಶೇಷ ರಜೆಯನ್ನು ಪಡೆಯಬಹುದು. ಅವರ ಸೇವೆಯ ಯಾವುದೇ ಅವಧಿಯಲ್ಲಿ, ಈ ರಜೆಯನ್ನು ಹಂತ ಹಂತವಾಗಿ ಅಥವಾ ಒಮ್ಮೆಲೇ ತೆಗೆದುಕೊಳ್ಳಲು ಅವಕಾಶವಿದೆ ಎಂದು ರಾಜ್ಯ ಸರಕಾರದ ವಕ್ತಾರರು ತಿಳಿಸಿದ್ದಾರೆ.

ಮಕ್ಕಳ ಪಾಲನೆ-ಪೋಷಣೆ, ಮಕ್ಕಳಿಗೆ ಪರೀಕ್ಷೆಯಿರುವ ಸಂದರ್ಭದಲ್ಲಿ ಅಥವಾ ಅಸೌಖ್ಯವುಂಟಾದ ಸಂದರ್ಭಗಳಲ್ಲಿ ಹೀಗೆ ತಾಯಿಗೆ ಯಾವ ಸಂದರ್ಭದಲ್ಲಿ ರಜೆಯ ಅವಶ್ಯಕತೆ ಬೀಳುತ್ತದೆಯೋ ಆ ವೇಳೆ 'ಮಕ್ಕಳ ಪೋಷಣಾ ರಜೆ' (ಸಿಸಿಎಲ್) ಎಂದು ಹೆಸರಿಸಲಾಗಿರುವ ಈ ರಜೆಯನ್ನು ಪಡೆದುಕೊಳ್ಳಬಹುದಾಗಿದೆ.

ಈ ಸಿಸಿಎಲ್ ರಜೆಯನ್ನು ನಿಗದಿತ ನಮೂನೆಯಲ್ಲಿ ಸಂಬಂಧಪಟ್ಟ ಉದ್ಯೋಗಿಯ ಸೇವಾ ದಾಖಲೆಯಲ್ಲಿ ನಮೂದಿಸಲಾಗುತ್ತದೆ.

ಸಿಸಿಎಲ್ ರಜೆಯನ್ನು ಗರಿಷ್ಠ ಎರಡು ವರ್ಷಗಳ ಕಾಲ (730 ದಿನಗಳು) ಮಹಿಳಾ ಸರಕಾರಿ ಉದ್ಯೋಗಿಯು ತನ್ನ ಇಬ್ಬರು ಮಕ್ಕಳಿಗೆ 18 ವರ್ಷವಾಗುವ ಮೊದಲು ಬಳಸಿಕೊಳ್ಳಬಹುದಾಗಿದೆ ಎಂದು ಹರ್ಯಾಣ ಮುಖ್ಯಮಂತ್ರಿ ಭೂಪೀಂದರ್ ಸಿಂಗ್ ಹೂಡಾ ತಿಳಿಸಿದ್ದಾರೆ.

ಈ ರಜೆಯ ಸಂದರ್ಭದಲ್ಲಿ ಸಂಬಂಧಪಟ್ಟ ಉದ್ಯೋಗಿಗೆ ಸಂಪೂರ್ಣ ವೇತನವನ್ನು ನೀಡಲಾಗುತ್ತದೆ. ಆದರೆ ಸುದೀರ್ಘ ರಜೆಯ ಮಧ್ಯೆ ಬರುವ ಶನಿವಾರ ಮತ್ತು ಭಾನುವಾರಗಳನ್ನೂ ಸಿಸಿಎಲ್‌ ರಜಾ ಪಟ್ಟಿಗೆ ಸೇರಿಸಲಾಗುತ್ತದೆ.

ಮಹಿಳಾ ನೌಕರರು ತಮ್ಮ ಸಿಸಿಎಲ್ ರಜೆಗಳನ್ನು ಇತರ ರಜೆಗಳ ಜತೆ ಸಂಯೋಜಿಸಬಹುದಾಗಿದೆ. ಆದರೆ ಮೂರನೇ ಅಥವಾ ಅದರ ನಂತರದ ಮಗುವಿನ ಪಾಲನೆ-ಪೋಷಣೆಗಾಗಿ ಸಿಸಿಎಲ್ ನೀಡಲಾಗುವುದಿಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ