ಸಿಪಿಎಂ ನಾಯಕನ ಶವ ಪತ್ತೆ
ಚೆನ್ನೈ: ಕಳೆದ 10 ದಿನಗಳಿಂದ ಕಾಣೆಯಾಗಿದ್ದ ಸಿಪಿಎಂ ನಾಯಕ ಡಬ್ಲ್ಯೂ.ಆರ್. ವರದರಾಜನ್ ಶವ ಚೆನ್ನೈಯ ಕಾಲುವೆಯೊಂದರಲ್ಲಿ ಪತ್ತೆಯಾಗಿದೆ. ತನ್ನ ಖಾತೆಗಳಲ್ಲಿನ ಹಣವನ್ನು ಪಕ್ಷದ ನಿಧಿಗೆ ಒಪ್ಪಿಸಿರುವುದು, ಲ್ಯಾಪ್ಟಾಪ್ಗಳು ಮತ್ತು ಪುಸ್ತಕಗಳನ್ನು ಸಿಪಿಎಂ ಪತ್ರಿಕೆ ತೀಕತಿರ್ಗೆ ನೀಡಿರುವುದು ಮತ್ತು ದೇಹವನ್ನು ಸಂಶೋಧನೆಗಾಗಿ ದಾನ ಮಾಡಿರುವುದು ಅವರು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಖಚಿತಪಡಿಸಿವೆ ಎಂದು ಪೊಲೀಸರು ತಿಳಿಸಿದ್ದು, ತನಿಖೆ ನಡೆಸುತ್ತಿದ್ದಾರೆ.