ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜೀವನಯೋಗ್ಯ ನಗರ; ದೇಶದಲ್ಲೇ ಬೆಂಗಳೂರಿಗೆ ನಾಲ್ಕನೇ ಸ್ಥಾನ (Delhi | Liveability Index | Mumbai | Bangalore)
Bookmark and Share Feedback Print
 
ದೇಶದಾದ್ಯಂತ ನಡೆಸಲಾಗಿರುವ 'ವಾಸಯೋಗ್ಯ ನಗರ' ಸಮೀಕ್ಷೆಯೊಂದರ ಪ್ರಕಾರ ದೆಹಲಿ ಅತ್ಯುತ್ತಮ ನಗರವೆಂದೂ, ಸಿಲಿಕಾನ್ ಸಿಟಿ ಬೆಂಗಳೂರು ನಾಲ್ಕನೇ ಅತ್ಯುತ್ತಮ ನಗರ ಮತ್ತು ಸುರಕ್ಷಿತ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಇನ್ನೇನು ಕಾಮನ್‌ವೆಲ್ತ್ ಗೇಮ್ಸ್ ಆರಂಭವಾಗಲಿರುವ ನಿಟ್ಟಿನಲ್ಲಿ ಇಂತಹ ಸಮೀಕ್ಷೆಯಲ್ಲಿ ಅಗ್ರ ಸ್ಥಾನ ಪಡೆದಿರುವುದು ಅತ್ಯುತ್ತಮ ಬೆಳವಣಿಗೆ ಎಂದು ಈ ಸಮೀಕ್ಷೆ ಹೇಳಿದೆ.

'ವಾಸಯೋಗ್ಯ ಸೂಚ್ಯಂಕ 2010' ಎಂಬ ಈ ಸಮೀಕ್ಷೆಯನ್ನು ಭಾರತೀಯ ಉದ್ಯಮದ ಮಹಾ ಒಕ್ಕೂಟ (ಸಿಐಐ) ಮತ್ತು ಸ್ಫರ್ಧಾತ್ಮಕತೆಯ ಸಂಘಟನೆ (ಐಎಫ್‌ಸಿ)ಗಳು ನಡೆಸಿದ್ದು, ಭಾರತದಲ್ಲಿ ದೆಹಲಿಯೇ ಜೀವನಯೋಗ್ಯ ನಗರ ಎಂದು ಪ್ರಮಾಣೀಕರಿಸಿದೆ.

ನಂತರದ ಎರಡರಿಂದ ಎಂಟರವರೆಗಿನ ಸ್ಥಾನಗಳಲ್ಲಿ ಮುಂಬೈ, ಚೆನ್ನೈ, ಬೆಂಗಳೂರು, ಕೊಲ್ಕತ್ತಾ, ಹೈದರಾಬಾದ್, ಅಹಮದಾಬಾದ್ ಮತ್ತು ಪುಣೆಗಳು ಕಾಣಿಸಿಕೊಂಡಿವೆ.

ಜನಸಂಖ್ಯಾ ಪ್ರಮಾಣ, ಶಿಕ್ಷಣ, ಆರೋಗ್ಯ ಮತ್ತು ವೈದ್ಯಕೀಯ ಗುಣಮಟ್ಟ, ಸುರಕ್ಷತೆ, ವಸತಿ, ಸಾಮಾಜಿಕ - ಸಾಂಸ್ಕೃತಿಕ - ರಾಜಕೀಯ ವಾತಾವರಣ, ಆರ್ಥಿಕ ವ್ಯವಸ್ಥೆ ಹಾಗೂ ನೈಸರ್ಗಿಕ ರಚನೆ ಮತ್ತು ಯೋಜಿತ ಪರಿಸರ ಎಂಬ ಎಂಟು ಮಾನದಂಡಗಳನ್ನು ಆಧರಿಸಿ ದೇಶದ 37 ನಗರಗಳಲ್ಲಿ ಈ ಸಮೀಕ್ಷೆಯನ್ನು ನಡೆಸಿ ಸ್ಥಾನಗಳನ್ನು ನಿರ್ಧರಿಸಲಾಗಿದೆ ಎಂದು ಸಮೀಕ್ಷಾ ತಂಡ ತಿಳಿಸಿದೆ.

ಇದರ ಪ್ರಕಾರ ದೇಶದಲ್ಲೇ ದೆಹಲಿ ಅತಿ ಸುರಕ್ಷಿತ ನಗರವೆಂದು ಹೊರ ಹೊಮ್ಮಿದ್ದರೆ, ನಂತರದ ಸ್ಥಾನಗಳಲ್ಲಿ ಭೋಪಾಲ್ ಮತ್ತು ಬೆಂಗಳೂರು ನಗರಗಳು ಸ್ಥಾನ ಪಡೆದಿವೆ.

ಶಿಕ್ಷಣ ಮತ್ತು ಉದ್ಯೋಗದ ವಿಷಯದಲ್ಲೂ ದೆಹಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ನಂತರದ ಎರಡು ಸ್ಥಾನಗಳು ಮುಂಬೈ ಮತ್ತು ಬೆಂಗಳೂರು ಪಾಲಾಗಿವೆ. ಇದರಲ್ಲಿ ಕಳಪೆ ಪ್ರದರ್ಶನ ತೋರಿಸಿರುವುದು ಭುವನೇಶ್ವರ, ಗುವಾಹತಿ, ಜೈಪುರ, ಕಾನ್ಪುರ, ಲಕ್ನೋ, ಪಾಟ್ನಾ ಮತ್ತು ವಡೋದರಗಳು.

ಆರೋಗ್ಯ ಮತ್ತು ವೈದ್ಯಕೀಯ ಗುಣಮಟ್ಟಗಳ ವಿಚಾರದಲ್ಲಿ ಮುಂಬೈ 12ನೇ ಸ್ಥಾನ ಪಡೆದರೆ, ಬೆಂಗಳೂರು 18ನೇ ಸ್ಥಾನದಲ್ಲಿದೆ.
ಸಂಬಂಧಿತ ಮಾಹಿತಿ ಹುಡುಕಿ