ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಮುಂಬೈ ಭಯೋತ್ಪಾದಕರಿಗೆ ಪಾಕ್ ಸೇನೆ ತರಬೇತಿ ನೀಡಿತ್ತು' (Pak government | Mumbai terror attacks | Ujjwal Nikam | Ajmal Kasab)
Bookmark and Share Feedback Print
 
ಮುಂಬೈ ಭಯೋತ್ಪಾದನಾ ದಾಳಿಯು ಪಾಕಿಸ್ತಾನದ ಸರಕಾರಿ ಪ್ರಾಯೋಜಿತ ಮತ್ತು ಆ ದೇಶದ ಮಿಲಿಟರಿ ಕೂಡ ದಾಳಿಯಲ್ಲಿ ಪಾಲ್ಗೊಂಡಿತ್ತು ಎಂದು ಈ ಪ್ರಕರಣದ ಅಂತಿಮ ವಿಚಾರಣೆ ನಡೆಯುತ್ತಿರುವ ವಿಶೇಷ ನ್ಯಾಯಾಲಯದಲ್ಲಿ ಸರಕಾರಿ ಅಭಿಯೋಜಕರು ಮಂಗಳವಾರ ಆರೋಪಿಸಿದ್ದಾರೆ.

2008ರ ನವೆಂಬರ್ 26ರಂದು ನಡೆದ ಭಯೋತ್ಪಾದಕರ ದಾಳಿಯ ಸಂಚು ರೂಪುಗೊಂಡದ್ದು ಪಾಕಿಸ್ತಾನದ ನೆಲದಲ್ಲಿ ಮತ್ತು ಈ ದಾಳಿಗೆ ಪಾಕಿಸ್ತಾನ ಬೆಂಬಲ ನೀಡಿತ್ತು ಎನ್ನುವುದು ಸಂಶಯಾತೀತ ಎಂದು ಸರಕಾರದ ವಿಶೇಷ ವಕೀಲ ಉಜ್ವಲ್ ನಿಕ್ಕಂ ವಾದಿಸಿದ್ದಾರೆ.

ಫಿರ್ಯಾದಿದಾರರ ಪ್ರಕಾರ ಜೀವಂತವಾಗಿ ಸೆರೆ ಸಿಕ್ಕ ಅಜ್ಮಲ್ ಕಸಬ್ ಮತ್ತು ಸಾವನ್ನಪ್ಪಿದ ಇತರ ಒಂಬತ್ತು ಮಂದಿ ಭಯೋತ್ಪಾದಕರಿಗೆ ಪಾಕಿಸ್ತಾನದ ಸೇನೆಯ ಅಧಿಕಾರಿಗಳ ಮುಂದಾಳುತ್ವದಲ್ಲಿ ಲಷ್ಕರ್ ಇ ತೋಯ್ಬಾ ಭಯೋತ್ಪಾದಕ ಸಂಘಟನೆಯು ಮಿಲಿಟಲಿ ಮತ್ತು ಬೇಹುಗಾರಿಕಾ ತರಬೇತಿ ನೀಡಿತ್ತು.

ಕಸಬ್ ನೀಡಿರುವ ತಪ್ಪೊಪ್ಪಿಗೆ ಹೇಳಿಕೆ ಪ್ರಕಾರ ಮೇಜರ್ ಜನರಲ್ ಒಬ್ಬರು ತರಬೇತಿ ಸಂದರ್ಭದಲ್ಲಿ ಹಾಜರಿದ್ದರು ಮತ್ತು ಅವರೇ ಶಿಕ್ಷಾರ್ಥಿಗಳ ಮೇಲ್ವಿಚಾರಣೆ ನಡೆಸಿದ್ದರು. ಆ ಮೇಜರ್ ಜನರಲ್ ಹೆಸರನ್ನು ಮುನ್ನೆಚ್ಚೆರಿಕೆ ಕ್ರಮವಾಗಿ ದಾಳಿಕೋರರಿಗೆ ತಿಳಿಯದಂತೆ ಮಾಡಲಾಗಿತ್ತು. ಆದರೆ ಅವರು ಸೇನೆಯಲ್ಲಿ ಮಹತ್ವದ ಹುದ್ದೆಯನ್ನು ಹೊಂದಿದ್ದಾರೆ ಎಂದು ನಿಕ್ಕಂ ವಿವರಿಸಿದ್ದಾರೆ.

ಲಷ್ಕರ್ ಇ ತೋಯ್ಬಾ ಮತ್ತು ಪಾಕಿಸ್ತಾನದ ಸೇನೆಯು ಅನ್ಯೋನ್ಯವಾಗಿ ಕಾರ್ಯನಿರ್ವಹಿಸಿದ್ದವು ಎಂದು ಆರೋಪಿಸಿರುವ ಪ್ರಾಸಿಕ್ಯೂಷನ್, ಈ ದಾಳಿಯ ಹಿಂದೆ ಪಾಕಿಸ್ತಾನದ ಪಾತ್ರವಿದೆ ಎಂಬುದನ್ನು ರಹಸ್ಯವಾಗಿಡಲು ಸಾಕಷ್ಟು ಯತ್ನಿಸಲಾಗಿತ್ತು ಎಂದೂ ಹೇಳಿದೆ.

ಭಾರತೀಯ ಹೆಸರುಗಳನ್ನು ಹೋಲುವ ನಕಲಿ ಗುರುತು ಚೀಟಿಗಳನ್ನು ದಾಳಿಕೋರರಿಗೆ ನೀಡಲಾಗಿತ್ತು. ಭಯೋತ್ಪಾದಕರಲ್ಲೊಬ್ಬನಾಗಿರುವ ಇಮ್ರಾನ್ ಬಾಬರ್ ಎಂಬಾತ ಟಿವಿ ವಾರ್ತಾವಾಹಿನಿಯೊಂದನ್ನು ಸಂಪರ್ಕಿಸಿ, ತಾನು ಭಾರತದ ಹೈದರಾಬಾದ್‌ನವ ಎಂದು ಹೇಳಿಕೊಂಡಿದ್ದ ಎಂಬುದನ್ನೂ ನಿಕಮ್ ನ್ಯಾಯಾಲಯಕ್ಕೆ ವಿವರಿಸಿದ್ದಾರೆ.

ದಾಳಿ ಹಿಂದೆ ಪಾಕಿಸ್ತಾನದ ಹೆಸರು ಕಾಣಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ರಾಷ್ಟ್ರೀಯತೆ ಮತ್ತು ತಮ್ಮ ನಿಜವಾದ ಗುರುತನ್ನು ಬಹಿರಂಗಪಡಿಸದಂತೆ ಭಯೋತ್ಪಾದಕರಿಗೆ ದಾಳಿಯ ಹಿಂದಿನ ಪ್ರಮುಖ ಪಾತ್ರಧಾರಿಗಳು ನಿರ್ದೇಶನ ನೀಡಿದ್ದರು.

ದಾಳಿಯಲ್ಲಿ ಪಾಲ್ಗೊಂಡಿರುವ ಇಬ್ಬರು ಭಾರತೀಯರ ಹೆಸರುಗಳನ್ನು ಇದೇ ಸಂದರ್ಭದಲ್ಲಿ ಬಹಿರಂಗಪಡಿಸಿದ ಅವರು, ಫಹೀಮ್ ಅನ್ಸಾರಿ ಮತ್ತು ಶಬಾಬುದ್ದೀನ್ ಅಹ್ಮದ್ ಎಂಬವರು ಲಷ್ಕರ್ ಇ ತೋಯ್ಬಾ ಸಂಘಟನೆಗೆ ಕೆಲವು ಸ್ಥಳಗಳ ನಕ್ಷೆಯನ್ನು ತಯಾರಿಸಿಕೊಟ್ಟಿದ್ದರು; ಆದರೆ ಅವರಿಗೆ ಈ ಪಿತೂರಿಯ ಕುರಿತು ಅರಿವಿರಲಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ